ಹೊಸದಿಗಂತ ಡಿಜಿಟಲ್ ಡೆಸ್ಕ್ :
ಫೆ.14 ರಂದು ಎಲ್ಲೆಡೆ ಪ್ರೇಮಿಗಳ ದಿನದಂದು ವೈದಿಕ ಸಂಪ್ರದಾಯವನ್ನು ಸಂಭ್ರಮಿಸುವುದಕ್ಕಾಗಿ ಹಸು ಅಪ್ಪಿಕೊಳ್ಳುವ ದಿನ (Cow Hug Day) ಆಚರಣೆಗೆ ನೀಡಿದ್ದ ಕರೆಯನ್ನು ಇದೀಗ ಪ್ರಾಣಿ ಕಲ್ಯಾಣ ಮಂಡಳಿ ವಾಪಸ್ ಪಡೆದಿದೆ.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, ಫೆಬ್ರವರಿ 14 ರಂದು ಹಸುವನ್ನು ತಬ್ಬಿಕೊಳ್ಳುವ ದಿನ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಎಸ್ಕೆ ದತ್ತಾ ತಿಳಿಸಿದ್ದಾರೆ.
ಪ್ರಾಣಿ ಕಲ್ಯಾಣ ಮಂಡಳಿಯು (Animal Welfare Board of India) ಪ್ರೇಮಿಗಳ ದಿನದಂದು ಹಸುವನ್ನು ತಬ್ಬಿಕೊಳ್ಳಬೇಕು ಎಂದು ಜನರಿಗೆ ಕರೆ ನೀಡಿತ್ತು. ಹೀಗೆ ಹಸುಗಳನ್ನು ತಬ್ಬಿಕೊಳ್ಳುವುದರಿಂದ ಇದು “ಭಾವನಾತ್ಮಕ ಶ್ರೀಮಂತಿಕೆ” ತರುತ್ತದೆ ಮತ್ತು “ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು” ಹೆಚ್ಚಿಸುತ್ತದೆ ಎಂದು ಹೇಳಿತ್ತು.