Tuesday, August 16, 2022

Latest Posts

ನಿಸರ್ಗದಲ್ಲೇ ಉತ್ತರ : ಒಳಾಂಗಣದ ಗಾಳಿ ಶುದ್ಧೀಕರಣಕ್ಕೆ ಐಐಟಿ ರೂಪಾರ್ ಅನ್ವೇಷಿಸಿರುವ ಸಾಧನ

ಮನುಕುಲದ ಮೇಲೆ ಯುದ್ಧ ಕಹಳೆ ಊದುತ್ತಿರುವ ಕೊರೋನಾ ಸದ್ಯಕ್ಕಂತು ಯುದ್ಧ ವಿರಾಮ ಘೋಷಿಸುವಂತೆ ಕಾಣುತ್ತಿಲ್ಲ. ಒಂದು ವೇಳೆ ಯುದ್ಧ ನಿಂತರೂ ಅದರ ದುಷ್ಪರಿಣಾಮಗಳು post covid coplication ರೂಪದಲ್ಲಿ ಆಗುತ್ತಲೇ ಇರುತ್ತದೆ ಎನ್ನುವುದು ನಿಶ್ಚಿತ.

ಮಹಾಮಾರಿ ಕೊರೋನಾ ಬದುಕಿನ ಶೈಲಿಯನ್ನು ಬದಲಾಯಿಸಿ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿರುವುದು ಎಷ್ಟು ನಿಜವೋ, ನಮ್ಮ ಅರ್ಧ ಆಯಸ್ಸನ್ನು ಕಿತ್ತುಕೊಳ್ಳುತ್ತಿರುವುದು ಕೂಡ ಅಷ್ಟೇ ನಿಜ.

ಒಮ್ಮೆ ಯೋಚಿಸಿ…ಬದುಕಲು ಮುಖ್ಯವಾಗಿ ಬೇಕಾಗಿರುವ ಗಾಳಿಯೇ ಅಶುದ್ಧವಾಗಿದ್ದರೆ ಈ ಬಾಡಿ ಗುಜರಿ ಗಾಡಿಯಾಗೋದ್ರಲ್ಲಿ ನೋ ಡೌಟ್. ಅದರಲ್ಲೂ ಈ ಕೊರೋನಾ ಭೀತಿಯಿಂದ ಜನ ಮನೆಯ ಅಂಗಳಕ್ಕೆ ಕಾಲಿಡಲೂ ಹೆದರುತ್ತಿದ್ದಾರೆ. ಒಬ್ಬರ ಉಸಿರು ಒಬ್ಬರು ತೆಗೆದುಕೊಳ್ಳುತ್ತ ಮನೆಯೊಳಗೆ ಬದುಕುತ್ತಿದ್ದಾರೆ. ಇದೇ ಪರಿಸ್ಥಿತಿ ಇನ್ನೊಂದು 8-10 ವರ್ಷ ಮುಂದುವರೆದರೆ ಏನಾಗಬಹುದು? ಊಹೂಂ ನೀವು ಈ ಬಗ್ಗೆ ಖಂಡಿತ ಯೋಚಿಸಿರಲ್ಲ.

ಆದರೆ ಐಐಟಿ ರೂಪಾರ್, ಕಾನ್ಪುರದ ವಿಜ್ಞಾನಿಗಳು, ದೆಹಲಿ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ ಫ್ಯಾಕಲ್ಟಿ ಈ ಬಗ್ಗೆ ಯೋಚಿಸಿದ್ದಾರೆ. ಅದನ್ನು ಯಶಸ್ವಿಯಾಗಿ ಕಾರ್ಯ ರೂಪಕ್ಕೂ ತಂದಿದ್ದಾರೆ.

ಹೌದು… ಸಜೀವ ಸಸ್ಯಗಳ ಮೂಲಕ ಒಳಾಂಗಣದಲ್ಲಿ ಗಾಳಿ ಶುದ್ಧೀಕರಿಸುವ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದನ್ನು “ಯುಬ್ರೀಥ್ ಲೈಫ್” (Ubreathe Life)  ಎಂದು ಕರೆದಿದ್ದಾರೆ.

ಐಐಟಿ ರೂಪಾರ್ ಸ್ಟಾರ್ಟ್ ಅಪ್ ಕಂಪನಿ ‘ಅರ್ಬನ್ ಏರ್ ಲ್ಯಾಬೋರೇಟರಿ’ ಗಾಳಿಯನ್ನು ಶುದ್ಧೀಕರಿಸುವ ‘ಸ್ಮಾರ್ಟ್ ಬಯೋ ಫಿಲ್ಟರ್’ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಕೇಂದ್ರ ವಿಜ್ಞಾನ ಮತು ತಂತ್ರಜ್ಞಾನ ಸಹಯೋಗದಲ್ಲಿ ಇದನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

C:\Users\HP\Desktop\2.jpeg

ಏನಿದು ‘ಸ್ಮಾರ್ಟ್ ಬಯೋ ಫಿಲ್ಟರ್’?

ಎಲೆಗಳಿಂದ ಕೂಡಿರುವ ಸಜೀವ ಸಸ್ಯಗಳ ಮೂಲಕ ಗಾಳಿಯನ್ನು ಶುದ್ಧೀಕರಿಸುವ ಸಾಧನ. ಈ ಸಸ್ಯಗಳ ಎಲೆಗಳು ಅಶುದ್ಧ ಗಾಳಿಯನ್ನು ತನ್ನಲ್ಲಿ ಎಳೆದುಕೊಂಡು ಅದನ್ನು ತನ್ನ ಉಸಿರಾಟದ ಬೇರಿಗೆ (breathe root ) ಕಳುಹಿಸಿ ಅಲ್ಲಿ ಗಾಳಿ ಶುದ್ಧಿಕರಿಸು ಪ್ರಕ್ರಿಯೇ  ನಡೆದು ಮತ್ತೆ ಎಲೆಯ ಮೂಲಕ ಶುದ್ಧ ಗಾಳಿಯನ್ನು ಹೊರ ಹಾಕುತ್ತದೆ.

ಈ ರೀತಿಯ ಶುದ್ಧೀಕರಣಕ್ಕೆ ಪೀಸ್ ಲಿಲಿ, ಸ್ನೇಕ್ ಪ್ಲಾಂಟ್, ಸ್ಪೈಡರ್ ಪ್ಲಾಂಟ್ ಇತರೆ ನಿರ್ದಿಷ್ಟ ಸಸ್ಯಗಳಿವೆ. ಇವುಗಳನು ಮರದ ಪೆಟ್ಟಿಗೆಯಲ್ಲಿ ಇದ್ದಿಲು ಮತ್ತು ಮಣ್ಣು ಮಿಶ್ರಣದಲ್ಲಿ ನೆಡಲಾಗುತ್ತದೆ. ಈ ಪೆಟ್ಟಿಗೆ ಯುವಿ,  ಫ್ರೀ ಫಿಲ್ಟರ್, ಚರ್ಕೋಲ್ ಫಿಲ್ಟರ್, ಎಚ್ ಈಪಿಎ ಫಿಲ್ಟರ್ ಸ್ಟಾಕ್ ಅಳವಡಿಸಲಾಗಿದೆ. ಇವು ಆ ಸಸ್ಯಗಳು ಗಾಳಿಯನ್ನು ಶುದ್ಧಿಕರಿಸಲು ಸಹಾಯ ಮಾಡುತ್ತದೆ.

C:\Users\HP\Desktop\3.jpeg

ಈ ಸಜೀವ ಸಾಧನವನ್ನು ನೀವು ಮನೆಯ ಕೊಠಡಿಗಳಲ್ಲಿ, ಶಾಲೆ, ಆಫೀಸ್ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು. ನಗರ ಪ್ರದೇಶದಲ್ಲಿ ಬಹಳ ಸಹಕಾರಿಯಾಗಲಿದೆ. ಅದರಲ್ಲೂ ಈ ಕೊರೋನಾ ಸಮಯದಲ್ಲಿ ಹೆಲ್ಪ್ ಫುಲ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!