Sunday, July 3, 2022

Latest Posts

ಬಾರ್ ಮಾಲೀಕನ ಹತ್ಯೆಗೆ ಸುಪಾರಿ ನೀಡಿದ್ದ ಆರೋಪಿಗಳ ಬಂಧನ

ಹೊಸ ದಿಗಂತ ವರದಿ,ಮದ್ದೂರು :

ಬಾರ್ ಮಾಲೀಕರನ್ನು ಅಪಘಾತವೆಸಗಿ ಹತ್ಯೆ ಮಾಡಲು ಸುಪಾರಿ ನೀಡಿದ್ದ ಆರೋಪದ ಮೇರೆಗೆ ಆರ್‌ಟಿಐ ಕಾರ‌್ಯಕರ್ತ ಸೇರಿದಂತೆ ಇಬ್ಬರನ್ನು ತಾಲೂಕಿನ ಕೆ.ಎಂ. ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ರಾಜೇಗೌಡನದೊಡ್ಡಿಯ ಆರ್‌ಟಿಐ ಕಾರ‌್ಯಕರ್ತ ಬಸವೇಗೌಡ, ಹಾಗೂ ಶರತ್ ಎಂಬುವರನ್ನು ಬಂಧಿಸಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ‌್ಯ ಕೈಗೊಂಡಿದ್ದಾರೆ.
ಆರ್‌ಟಿಐ ಕಾರ‌್ಯಕರ್ತ ಬಸವೇಗೌಡ ಹಾಗೂ ಆರೋಪಿ ಶರತ್ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಮದ್ದೂರು ಜೆಎಂಎ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ಬಸವೇಗೌಡರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶರತ್‌ನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಆರೋಪಿಗಳು ಕುಕೃತ್ಯಕ್ಕೆ ಬಳಸಿದ ಕಾರು, ಬೈಕ್ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಬಂಧನದಲ್ಲಿರುವ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಐಪಿಸಿ 279, 337, 307, 120 ಹಾಗೂ ಐಎಂಇ ಕಾಯಿದೆ 187ರನ್ವಯ ಪ್ರಕರಣ ದಾಖಲಿಸಲಾಗಿದೆ.
ಬಂಧಿತರಾಗಿರುವ ಆರ್.ಟಿ.ಐ ಕಾರ‌್ಯಕರ್ತ ಬಸವೇಗೌಡ ಹಾಗೂ ಕೆ.ಎಂ.ದೊಡ್ಡಿಯ ಸಂಕ್ರಾಂತಿ ಬಾರ್ ಮಾಲೀಕ ನಾಗರಾಜು ಅವರು ಬಾರ್ ಪರವಾನಗಿ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಹಿನ್ನಲೆಯಲ್ಲಿ ನಾಗರಾಜು ಹಾಗೂ ಆತನ ಮಗ ಅರುಣ್‌ಕುಮಾರ್ ಅವರುಗಳು ಬಸವೇಗೌಡನ ಮೇಲೆ ಮಂಡ್ಯ ಅಬಕಾರಿ ಕಚೇರಿ ಬಳಿ ಹಲ್ಲೆ ನಡೆದಿತ್ತು. ಈ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss