ಹೊಸ ದಿಗಂತ ವರದಿ, ಮಡಿಕೇರಿ:
ಚೆಂಡು ಹೆಕ್ಕಲು ಹೋಗಿ ಬಾಲಕನೊಬ್ಬ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಲ್ಲಿಗೆ ಸಮೀಪದ ಕಡಗದಾಳು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ತುರ್ಕರಟ್ಟಿ ನಿವಾಸಿ ಶಿವಬಾಲನ್ ಎಂಬವರ ಪುತ್ರ ಸಂತೋಷ್ (10) ಎಂದು ಗುರುತಿಸಲಾಗಿದೆ.
ಕಡಗದಾಳು ಶಾಲೆಯ ಬಳಿ ಕ್ರಿಕೆಟ್ ಚೆಂಡಿನಲ್ಲಿ ಆಟವಾಡುತ್ತಿದ್ದಾಗ ಚೆಂಡು ಕೆರೆಗೆ ಬಿದ್ದಿದ್ದು ಅದನ್ನು ಹೆಕ್ಕಲೆಂದು ಹೋದಾಗ ಆತ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.