spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗಡ್ಡ ನನ್ನ ಐಡೆಂಟಿಟಿಗಾಗಿ ಮಾಡಿಕೊಂಡ ಅಭ್ಯಾಸ: ಸಿ.ಟಿ.ರವಿ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ವರದಿ, ಚಿಕ್ಕಮಗಳೂರು:

ನಾನು ಗಡ್ಡ ಬಿಟ್ಟಿರುವುದು ಸಿಎಂ ಆಗಬೇಕು ಎನ್ನುವ ಕಾರಣಕ್ಕಲ್ಲ. ಅದು ನನ್ನ ಐಡೆಂಟಿಟಿಗಾಗಿ ಮಾಡಿಕೊಂಡ ಅಭ್ಯಾಸ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಇತ್ತೀಚೆಗೆ ವಿಜಯಪುರದ ಮೈಲಾರಲಿಂಗಸ್ವಾಮಿ ಅವರು 2022 ಮಾರ್ಚ್‍ನಲ್ಲಿ ಗಡ್ಡದಾರಿಯೊಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ನುಡಿದಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿ, ಆ ಬಗ್ಗೆ ನನಗೇನೂ ಗೊತ್ತಿಲ್ಲ. ನಾನಂತೂ ಮುಖ್ಯಮಂತ್ರಿ ಆಗಬೇಕು ಎನ್ನುವ ಕಾರಣಕ್ಕೆ ಗಡ್ಡ ಬಿಟ್ಟಿರುವುದಲ್ಲ. ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡ ಬಿಡುತ್ತಲೇ ಬಂದಿದ್ದೇನೆ ಎಂದರು.
ಅವರು ಹೇಳಿರುವುದು ನಿಜವಾದಲ್ಲಿ ಯಾರ್ಯಾರು ಸಿಎಂ ಆಗಬೇಕು ಎನ್ನುವ ಆಕಾಂಕ್ಷೆ ಹೊಂದಿರುತ್ತಾರೋ ಅವರೆಲ್ಲ ಗಡ್ಡ ಬಿಡಲು ಪ್ರಾರಂಭಿಸಬಹುದು. ನಾನು ನನ್ನ ಐಡೆಂಟಿಟಿಗಾಗಿ ಹಣೆಗೆ ತಿಲಕ, ಕಿವಿಗೆ ಟಿಕ್ಕಿ ಹಾಗೂ ಗಡ್ಡ ಬಿಡುವುದನ್ನು ಅಭ್ಯಾಸ ಮಾಡಿದ್ದೇನೆ ಎಂದರು.
ನಾನು ಪಕ್ಷ ನಿಷ್ಟೆ ಮತ್ತು ಪರಿಶ್ರಮ ಎರಡರಲ್ಲಿ ಮಾತ್ರ ನಂಬಿಕೆ ಇಟ್ಟವನು. ಹತ್ತಾರು ಬಾರಿ ನಾನು ಅದನ್ನು ಮೆಲಕು ಹಾಕಿದ್ದೇನೆ. ಆಲ್ದೂರಿನಲ್ಲಿ ಪುಟ್ಟಪ್ಪನವರು ನನ್ನನ್ನು 1990 ರ ದಶಕದಲ್ಲಿ ಹೋಬಳಿ ಪ್ರಧಾನ ಕಾರ್ಯದರ್ಶಿ ಮಾಡಿದಾಗ ನಿನಗೆ ಭವಿಷ್ಯ ಇದೆ, ಪಕ್ಷ ನಿಷ್ಠೆ ಬಿಡಬೇಡ, ಪರಿಶ್ರಮದಿಂದ ಕೆಲಸ ಮಾಡು ಎಂದಿದ್ದರು. ಅದೇ ಮಂತ್ರವನ್ನು ಇಂದಿಗೂ ಪಾಲಿಸುತ್ತಾ ಬಂದಿದ್ದೇನೆ. ಈ ಕಾರಣಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರೆಗೆ ಬಂದು ಮುಟ್ಟಿದ್ದೇನೆ. ಇದನ್ನು ಮೀರಿ ಭಗವಂತನ ಆಶೀರ್ವಾದ ಏನಿದೆ ಎನ್ನುವುದು ನಮಗೆ ಗೊತ್ತಿಲ್ಲ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss