ಈ ವರ್ಷದ ಅತ್ಯುತ್ತಮ ಸಿನಿಮಾ ‘ಕಾಂತಾರಾ’, ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರೋ ಕಾಂತಾರಾ ಸಿನಿಮಾ ಇಂದು ರಿಲೀಸ್ ಆಗಿದೆ. ನಿನ್ನೆ ಕಾಂತಾರಾ ಸಿನಿಮಾದ ಪ್ರೀಮಿಯರ್ ಶೋ ಇದ್ದು, ಸೆಲೆಬ್ರಿಟಿಗಳ ದಂಡೇ ಸಿನಿಮಾ ನೋಡಿತ್ತು. ಪ್ರತಿಯೊಬ್ಬರು ಸಿನಿಮಾ ನೋಡಿ ಮಂತ್ರಮುಗ್ಧರಾಗಿದ್ದು, ಈ ವರ್ಷದ ಅತ್ಯುತ್ತಮ ಸಿನಿಮಾ ಕಾಂತಾರಾ ಎನ್ನುತ್ತಿದ್ದಾರೆ.

ರಕ್ಷಿತ್ ಶೆಟ್ಟಿ, ರಮ್ಯಾ, ಅಮೂಲ್ಯ, ಅನುಶ್ರೀ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಪ್ರವೀಣ್, ಅಚ್ಯುತ್ ಇನ್ನೂ ಹಲವು ಕಲಾವಿದರು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಸಿನಿಮಾ ಕಡೆಗೆ ಸೀಟ್‌ನಿಂದ ಎದ್ದು ಓಡಿ ಬಂದು ರಿಷಭ್ ಶೆಟ್ಟಿಗೆ ಪ್ರೀತಿಯ ಅಪ್ಪುಗೆ ನೀಡಿ ಕಣ್ಣೀರಿಟ್ಟಿದ್ದಾರೆ.

ರಮ್ಯಾ ಈ ರೀತಿ ಸಿನಿಮಾ ನಾನು ಎಲ್ಲಿಯೂ ನೋಡಿಲ್ಲ, ಇಡೀ ತಂಡದ ಕೆಲಸಕ್ಕೆ ಹ್ಯಾಟ್ಸ್‌ಆಫ್ ಎಂದಿದ್ದಾರೆ. ಇನ್ನು ಅಮೂಲ್ಯ ಕೂಡ ಸಿನಿಮಾ ಹೊಗಳಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಿಂದ ಇನ್ನಷ್ಟು ಈ ರೀತಿ ಸಿನಿಮಾಗಳು ಬರಲಿ ಎಂದಿದ್ದಾರೆ.

'ಕಾಂತಾರಾ' ಚಿತ್ರ ವಿಮರ್ಶೆ ಮಾಡಿದ್ರು ರಮ್ಯಾ, ಸಿನಿಮಾ ಹೇಗಿದೆ ಗೊತ್ತಾ?ನಟನೆ ಹಾಗೂ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಈಗಾಗಲೇ ವಿಭಿನ್ನ ಛಾಪನ್ನು ಮೂಡಿಸಿದ್ದು, ಇದೀಗ ಈ ಸಿನಿಮಾ ಬೇರೇನೆ ಲೆವೆಲ್‌ನಲ್ಲಿದೆ, ಇದು ಈ ವರ್ಷದ ಅತ್ಯುತ್ತಮ ಸಿನಿಮಾ ಎಂದು ಅನುಶ್ರೀ ಕೊಂಡಾಡಿದ್ದಾರೆ.

ಇಂದು ಸಿನಿಮಾ ಜನರ ಮುಂದೆ ಬಂದಿದ್ದು, ಫುಲ್ ಪೈಸಾ ವಸೂಲ್ ಸಿನಿಮಾ ಅಂತಿದ್ದಾರೆ ಅಭಿಮಾನಿಗಳು. ಅದರಲ್ಲಿಯೂ ಕ್ಲೈಮಾಕ್ಸ್ ಬಗ್ಗೆ ಎಲ್ಲರೂ ಹೆಚ್ಚು ಮಾತನಾಡಿದ್ದು, ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!