Thursday, August 11, 2022

Latest Posts

ಮನರಂಜನೆಯ ಮಹಾಪೂರ: ದಿ ಬೆಸ್ಟ್ ವೆಬ್ ಸೀರಿಸ್ ‘ಮನಿ ಹೈಸ್ಟ್’ ವೀಕ್ಷಿಸಿದ ಕೋಟ್ಯಾಂತರ ಜನರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಈಗಾಗಲೇ ನಾಲ್ಕು ಸೀಸನ್ ಮೂಲಕ ಜನರ ಮನಗೆದ್ದಿರುವ ವೆಬ್ ಸೀರಿಸ್ ಗಳಲ್ಲಿ ‘ಮನಿ ಹೈಸ್ಟ್’ ಕೂಡ ಒಂದಾಗಿದೆ. ರಿಲೀಸ್ ಆದ ಒಂದೇ ದಿನಕ್ಕೆ ಕೋಟ್ಯಾಂತರ ಮಂದಿ ವೀಕ್ಷಿಸಿದ್ದಾರೆ.
ಸ್ಪಾನಿಷ್ ತ್ರಿಲ್ಲರ್ ಸ್ಟೋರಿಯ ಮನಿ ಹೈಸ್ಟ್ ವೆಬ್ ಸೀರಿಸ್ ನ ಸೀಸನ್ 5ರ ಮೊದಲೇ ಕಂತು ನಿನ್ನೆ ಬಿಡುಗಡೆಯಾಗಿದ್ದು, ಸೀರಿಸ್ ಲವರ್ಸ್ ಫುಲ್ ಖುಷ್ ಆಗಿದ್ದಾರೆ.
2017ರಲ್ಲಿ ಮನಿ ಹೈಸ್ಟ್ ಮೊದಲ ಬಾರಿಗೆ ಬಿಡುಗಡೆಯಾಗಿದ್ದು, ಇದರಲ್ಲಿನ ಟೋಕಿಯೋ, ಬರ್ಲಿನ್, ಹಲ್ಸಿಂಕಿ ಪಾತ್ರಗಳು ಸೀರೀಸ್ ಗೆ ಜೀವತುಂಬಿದೆ. ಇದರಲ್ಲಿನ ಆಕ್ಷನ್, ಟ್ವಿಸ್ ಹಾಗೂ ಎಮೋಷನ್ ಗಳು ಜನರಿಗೆ ಸಖತ್ ಥ್ರಿಲ್ಲಿಂಗ್ ಫೀಲ್ ಕೊಡುತ್ತಿದೆ.
ಮನಿ ಹೈಸ್ಟ್ ಸೀರೀಸ್ ತನ್ನ ಮೊದಲೆರಡು ಸೀಸನ್ ನಲ್ಲಿಯೇ ಜನರಿಂದಮೆಚ್ಚುಗೆ ಪಡೆದು ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಐದನೇ ಸೀಸನ್ ನ ಮೊದಲ ಕಂತು ರಿಲೀಸ್ ಆಗಿದ್ದು, ಎಲ್ಲೆಡೆ ಅದರದ್ದೇ ಮಾತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss