ಹೊಸದಿಗಂತ ವರದಿ, ಯಲ್ಲಾಪುರ :
ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಬೈಕನ್ನು ಕದ್ದೊಯ್ದಿದ್ದ ಕಳ್ಳನನ್ನು ಯಲ್ಲಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಮಾದೇವಕೊಪ್ಪದ ಬೆಂಡು ಜನ್ನು ಪಾಂಡ್ರಮಿಸೆ ಎಂಬುವವರು ತಮ್ಮ ಮನೆಯ ಅಂಗಳದಲ್ಲಿ ನಿಲ್ಲಿಸಿಟ್ಟಿದ್ದ ಸ್ಪ್ಲೆಂಡರ್ ಬೈಕ್ ರಾತ್ರಿ ಹೊತ್ತು ಕಳ್ಳತನವಾಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ತಾಲೂಕಿನ ಜಡಗಿನಕೊಪ್ಪದ ಪ್ರಕಾಶ ಕೃಷ್ಣ ಸಿದ್ದಿ ಎಂಬಾತನನ್ನು ಬಂಧಿಸಿದ್ದು, ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.