Thursday, August 11, 2022

Latest Posts

ಬಿಜೆಪಿ ಕೇವಲ ಅಧಿಕಾರಕ್ಕಾಗಿ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸು ರಾಜಕೀಯ ಪಕ್ಷವಲ್ಲ: ಸಿದ್ದರಾಜ ಕಲಕೋಟಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ,ಹಾವೇರಿ:

ಭಾರತೀಯ ಜನತಾ ಪಕ್ಷ ಕೇವಲ ಅಧಿಕಾರಕ್ಕಾಗಿ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಕೀಯ ಪಕ್ಷವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ರುದ್ರಪ್ಪ ಬಳ್ಳಾರಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಇದೇ ದಿ.೧೭ ರಿಂದ ಅ.೭ರವರೆಗೆ ಜರುಗಲಿರುವ ಸೇವೆ ಮತ್ತು ಸಮರ್ಪಣಾ ಅಭಿಯಾನದ ನಿಮಿತ್ಯ ಮಂಗಳವಾರ ಆಯೋಜಿಸಿದ್ದ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.
ಸೇವೆ ಮತ್ತು ಸಮರ್ಪಣಾ ಭಾವದಿಂದ ಹಲವಾರು ಮಹನೀಯರ ತ್ಯಾಗ, ಬಲಿದಾನದಿಂದ, ಸೇವೆಯ ಮೂಲಕವೇ ಸಾಮಾಜದ ಮುಖ್ಯ ವೇದಿಕೆಗೆ ಬಂದ ರಾಜಕೀಯ ಪಕ್ಷ ಬಿಜೆಪಿಯಾಗಿದೆ. ಈ ಪಕ್ಷದ ಕಾರ್ಯಕರ್ತರಾದ ನಾವೇಲ್ಲರು ಸೇವೆಯ ಮೂಲಕ ನಮ್ಮ ಕರ್ತವ್ಯವನ್ನು ಸಮಾಜಕ್ಕೆ ಅರ್ಪಿಸಬೇಕೆಂದು ಹೇಳಿದರು.
ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.೧೭ ರಂದು ರಕ್ತದಾನ ಶಿಬಿರಗಳನ್ನು ಪ್ರತಿ ಮಂಡಲಗಳಲ್ಲಿ ಆಯೋಜಿಸಬೇಕೆಂದರಲ್ಲದೆ ಸೆ.೨೫ ರಂದು ಪಂಡಿತ್ ದೀನದಯಾಳ್ ಉಪಧ್ಯಾಯರ ಜನ್ಮದಿನದ ಪ್ರಯುಕ್ತ ಪ್ರತಿ ಬೂತಿನಲ್ಲಿ ಪಂಡಿತಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವದರ ಮೂಲಕ ಗೌರವ ಸಮರ್ಪಣೆ ಮತ್ತು ಸೇವಾ ಕಾರ್ಯಗಳನ್ನು ಮಾಡಬೇಕೆಂದು ಕರೆಕೊಟ್ಟರು.
ಜಿಲ್ಲಾ ಪ್ರಭಾರಿ ಕಲ್ಲೇಶ ಎನ್.ಎಲ್ ಮಾತನಾಡಿ, ಅ.೨ ರಂದು ಗಾಂಧೀ ಜಯಂತಿಯನ್ನು ಸ್ವಚ್ಚತಾ ಕಾರ್ಯ ಮಾಡುವದರ ಮೂಲಕ ಗಾಂಧೀಜಿ ಕಂಡ ಸ್ವಚ್ಚ ಭಾರತದ ಕಲ್ಪನೆಯನ್ನು ಸಹಕಾರಗೊಳಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.
ವಿಭಾಗ ಸಂಘಟನಾ ಪ್ರಧಾನಕಾರ್ಯದರ್ಶಿ ರಾಜಕುಮಾರ ಬಸವ ಮಾತನಾಡಿ, ನವಭಾರತ ಉತ್ಸವ, ಕ್ಲಬ್ ಹೌಸ್ ಚರ್ಚೆ, ಸಾಮಾಜಿಕ ಜಾಲತಾಣಗಳ ಮೂಲಕ ಸೇವಾ ಕಾರ್ಯಗಳ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಪ್ರಚಾರ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರದೀಪ ಮುಳ್ಳೂರ, ಕೃಷ್ಣಾ ಈಳಗೇರ, ಶಶಿಧರ ಹೊಸಳ್ಳಿ, ಡಾ. ಸಂತೋಷ ಆಲದಕಟ್ಟಿ, ಶಿವಯೋಗಿ ಶಿರೂರ, ವರುಣ ಆನವಟ್ಟಿ ಹಾಗೂ ಅಪೇಕ್ಷಿತ ಜಿಲ್ಲೆಯ ಹಾಗೂ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss