Sunday, August 14, 2022

Latest Posts

ಬಿಜೆಪಿ ಎಸ್.ಸಿ ಮೋರ್ಚಾದಿಂದ ವಾಲ್ಮೀಕಿ ಜಯಂತಿ ಆಚರಣೆ

ಹೊಸ ದಿಗಂತ ವರದಿ, ಅಂಕೋಲಾ:

ಆರ್ಥಿಕವಾಗಿ ಕಷ್ಟದಲ್ಲಿ ಇರುವ ಕುಟುಂಬವೊಂದರ ಬಾಲಕಿಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಲು ಮುಂದಾಗುವ ಮೂಲಕ ಭಾರತೀಯ ಜನತಾ ಪಕ್ಷದ ಎಸ್.ಸಿ ಮೋರ್ಛಾದ ತಾಲೂಕು ಘಟಕದ ವತಿಯಿಂದ ವೈಶಿಷ್ಟ್ಯಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ತಂದೆಯನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಇರುವ ಮಾನವಿ ಮಾರುತಿ ಬಂಟ ಎಂಬ ಬಾಲಕಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಎಸ್.ಸಿ ಮೋರ್ಛಾ ಅಧ್ಯಕ್ಷ ಮುರಳಿಧರ ಬಂಟ ಮತ್ತು ಪದಾಧಿಕಾರಿಗಳು ಬಡ ವಿದ್ಯಾರ್ಥಿನಿಗೆ ಬಟ್ಟೆ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಮಾತನಾಡಿ ಮಾನವೀಯ ಮೌಲ್ಯಗಳ ಕೆಲಸಗಳ ಮೂಲಕ ಕಾರ್ಯಕ್ರಮಗಳ ಆಚರಣೆ ಅರ್ಥಪೂರ್ಣವಾದುದು ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ, ಮಂಡಲ ಕಾರ್ಯದರ್ಶಿ ನಾಗೇಶ ಕಿಣಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಾ ಹರಿಕಂತ್ರ, ಜಿಲ್ಲಾ ಯುವ ಮೋರ್ಛಾ ಕಾರ್ಯದರ್ಶಿ ಪ್ರವೀಣ ನಾಯ್ಕ, ಮಹಿಳಾ ಮೋರ್ಛಾ ಸದಸ್ಯೆ ತಾರಾ ಗಾಂವಕರ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಎಸ್. ಸಿ ಮೋರ್ಛಾ ಅಧ್ಯಕ್ಷ ಮುರಳಿಧರ ಬಂಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಕಾರ್ಯದರ್ಶಿ ಗುರು ಶೇಡಗೇರಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss