ಕುಡಿದು ಬಂದು ಅಮ್ಮನಿಗೆ ಹೊಡೀತಾರೆ, ಅಪ್ಪನ ವಿರುದ್ಧ ಕಂಪ್ಲೆಂಟ್ ಕೊಟ್ಟ ಬಾಲಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗೆಲ್ಲಾ ಪತಿ ಕುಡಿದು ಮನೆಗೆ ಬಂದರೂ ತಮ್ಮ ಪಾಡಿಗೆ ನಾವು ಮಲಗಿಬಿಡುತ್ತಾರೆ, ಹೆಂಡತಿಯರನ್ನು ಕೆದಕಿ ಮಾತಿಗೆಳೆಯೋದು, ಹೊಡೆಯೋದು ಮಾಡೋದಿಲ್ಲ ಎಂದು ಅಂದುಕೊಳ್ತೀರಾ?

ಈಗಲೂ ಕುಡಿದು ಬಂದು ಸುಖಾಸುಮ್ಮನೆ ಹೆಂಡತಿಯರ ಮೇಲೆ ಕೈ ಮಾಡುವ ಗಂಡಂದಿರೂ ಇದ್ದಾರೆ. ಇದಕ್ಕೆ ನಿದರ್ಶನದಂತೆ ಅಮ್ಮನಿಗೆ ಅಪ್ಪಾ ದಿನವೂ ಕುಡಿದು ಬಂದು ಹೊಡೀತಾರೆ, ಅಮ್ಮ ಅಳೋದು ನೋಡೋಕಾಗೋದಿಲ್ಲ ಎಂದು ಮಗ ಪೊಲೀಸರಿಗೆ ದೂರು ನೀಡಿದ್ದಾರೆ.

ಆಂಧ್ರಪ್ರದೇಶದ ಕರ್ಲಂಪಾಲೆಂ ಮಂಡಲದ ಇಸ್ಲಾಂಪೇಟೆ ಠಾಣೆಗೆ ಒಂಬತ್ತು ವರ್ಷದ ಬಾಲಕ ರಹೀಂ ಠಾಣೆಗೆ ಬಂದು ಪೊಲೀಸರನ್ನು ನೋಡಬೇಕು ಎಂದಿದ್ದಾನೆ. ನೀನು ಇಲ್ಲೇನು ಮಾಡ್ತಿದ್ದೀಯಾ, ಹೊರಡು ಎಂದು ಪೊಲೀಸರು ಹೇಳಿದಾಗ ನನ್ನ ತಂದೆ ದಿನವೂ ಕುಡಿದು ಅಮ್ಮನಿಗೆ ಹೊಡೆಯುತ್ತಾರೆ, ಅಮ್ಮ ಎಷ್ಟು ಬೇಡಿಕೊಂಡರೂ ಬಿಡದೆ ಹೊಡೆಯುತ್ತಾರೆ. ಹಾಗಾಗಿ ಅಪ್ಪನ ಬಗ್ಗೆ ನಿಮಗೆ ಹೇಳೋಕೆ ಬಂದೆ ಎಂದು ಬಾಲಕ ಹೇಳಿದ್ದಾನೆ. ಅಷ್ಟೇ ಅಲ್ಲದೆ ಅಪ್ಪನ ವಿರುದ್ಧ ಕ್ರಮ ಕೈಗೊಳ್ಳಿ ಎಂದೂ ಆತ ಹೇಳಿದ್ದಾನೆ.

ರಹೀಂ ತಂದೆ ಸುಭಾನಿ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಾರೆ, ತಾಯಿ ಸುಭಾಂಬಿ ಮನೆಯಲ್ಲಿಯೇ ಇರುತ್ತಾರೆ, ಕೆಲಸ ಮುಗಿದ ನಂತರ ಕುಡಿದು ಬಂದು ಹೆಂಡತಿಗೆ ಹೊಡೆಯುತ್ತಾರೆ, ಪೊಲೀಸರು ಪೋಷಕರನ್ನು ಠಾಣೆಗೆ ಕರೆಸಿ ಮಕ್ಕಳೆದುರು ದುರ್ವರ್ತನೆ ತೋರಿದ, ಹೆಂಡತಿಗೆ ಹೊಡೆದ ಸುಭಾನಿಗೆ ಛೀಮಾರಿ ಹಾಕಿ ಇನ್ನೆಂದೂ ಈ ಘಟನೆ ನಡೆಯದಂತೆ ಎಚ್ಚರಿಕೆ ನೀಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!