Wednesday, August 10, 2022

Latest Posts

ಸೈಕಲ್ ಖರೀದಿಸಲು ಇಟ್ಟಿದ್ದ ಹಣವನ್ನು ಪರಿಹಾರ ನಿಧಿಗೆ ಕೊಟ್ಟ ಬಾಲಕ! ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಸ್ಟಾಲಿನ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾದಿಂದ ಜಗತ್ತೇ ಬದಲಾಗಿದೆ. ಜನರೇ ಜನರಿಗೆ ಆಗಬೇಕಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೆಲೆಬ್ರಿಟಿಗಳು ಆದಷ್ಟು ಸಹಾಯ ಮಾಡುತ್ತಿದ್ದಾರೆ. ಇದೇ ರೀತಿ ಏಳು ವರ್ಷದ ಬಾಲಕನೊಬ್ಬ ತಾನು ಸೈಕಲ್ ಕೊಳ್ಳಲು ಕೂಡಿಟ್ಟಿದ್ದ ಹಣವನ್ನು ಪರಿಹಾರ ನಿಧಿಗೆ ತಲುಪಿಸಿದ್ದಾನೆ.
ಹರೀಶ್ ವರ್ಮಾನ್ ದೇಣಿಗೆ ನೀಡಿದ ಪುಟ್ಟ ಬಾಲಕ. ಹರೀಶ್‌ಗೆ ಸೈಕಲ್ ಕೊಳ್ಳುವ ಕನಸು. ಅಪ್ಪನ ಬಳಿ ಪ್ರತಿದಿನ ಸ್ವಲ್ಪ ಹಣ ಕೇಳಿ ತನ್ನ ಪಿಗ್ಗಿಬ್ಯಾಂಕ್‌ಗೆ ಹಾಕಿಕೊಳ್ಳುತ್ತಿದ್ದ. ಅಪ್ಪ ಕೊಟ್ಟ ಹಣವನ್ನು ಹರೀಶ್ ಜಾಗ್ರತೆಯಿಂದ ಎತ್ತಿಡುತ್ತಿದ್ದ.

ತಮಿಳುನಾಡಿನಲ್ಲಿ ಸೋಂಕು ಹೆಚ್ಚಳವಾಗಿ ರಾಜ್ಯದಲ್ಲಿ ಸಿಎಂ ಕೋವಿಡ್ ನಿಧಿಗೆ ಹಣ ಸಂಗ್ರಹವಾಗುತ್ತಿರುವ ವಿಷಯ ತಿಳಿದ ಹರೀಶ್ ತನ್ನ ಪಿಗ್ಗಿಬ್ಯಾಂಕ್ ಹಣವನ್ನು ಕೊಡಲು ನಿರ್ಧರಿಸಿದ್ದಾನೆ. ಡಬ್ಬಿಯೊಂದಿಗೆ ಸ್ಟಾಲಿನ್ ಅವರಿಗೆ ಕೈ ಬರಹವನ್ನು ಬರೆದು ಸಿಎಂಗೆ ಕಳಿಸಿದ್ದಾರೆ. ಸ್ಟಾಲಿನ್ ಅವರಿಗೆ ಪಿಗ್ಗಿಬ್ಯಾಂಕ್ ತಲುಪಿದ ತಕ್ಷಣ ಅವರು ಹರೀಶ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹರೀಶ್‌ಗಾಗಿ ಹೊಸ ಸೈಕಲ್ ಉಡುಗೊರೆಯನ್ನಾಗಿ ನೀಡಿದ್ದಾರೆ. ಹರೀಶ್ ಚಿಕ್ಕವನಾದರೂ ಆತ ಮಾಡಿರುವ ಕೆಲಸ ತುಂಬಾನೇ ದೊಡ್ಡದು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss