Wednesday, August 10, 2022

Latest Posts

ಸೈಕಲ್​ ತೆಗೆದುಕೊಳ್ಳಲು ಕೂಡಿಟ್ಟ ಹಣವನ್ನು ಕೋವಿಡ್​ ಪರಿಹಾರ ನಿಧಿಗೆ ನೀಡಿದ ಬಾಲಕ: ಸಿಎಂ ಸ್ಟಾಲಿನ್ ಕೊಟ್ರು ಸರ್ಪೈಸ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶವು ಕೊರೋನಾ ಸಂಕಷ್ಟದಲ್ಲಿದ್ದು, ಈ ವೇಳೆ ಅನೇಕ ಜನರು ತಮ್ಮಿಂದ ಆಗುವಷ್ಟು ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸೋಂಕಿತರ ಸಹಾಯಕ್ಕೆ ಮುಂದಾಗುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ತಮಿಳುನಾಡಿನ ಮಧುರೈನ ಏಳು ವರ್ಷದ ಬಾಲಕನೊಬ್ಬ ಕೂಡ ತಾನು ಕೂಡಿಟ್ಟಿದ್ದ ಹಣವನ್ನು ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದಾನೆ.
ಮಧುರೈನ ಹರೀಶ್​ (7) ಹೆಸರಿನ ಬಾಲಕ ಸೈಕಲ್​ ತೆಗೆದುಕೊಳ್ಳಬೇಕೆಂದು ಹಣವನ್ನು ಕೂಡಿಟ್ಟಿದ್ದ, ಆದರೆ ಕೊರೋನಾ ಎರಡನೇ ಅಲೆಯಲ್ಲಿ ಜನರು ಸಾಯುತ್ತಿರುವುದನ್ನು ಕಂಡು ನೋವುಂಡ ಆತ, ತಾನು ಕೂಡಿಟ್ಟಿದ್ದ ಹಣವನ್ನು ರಾಜ್ಯದ ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದಾನೆ. ಅದರ ಜತೆ ಮುಖ್ಯಮಂತ್ರಿಗೆ ಒಂದು ಪತ್ರವನ್ನೂ ಬರೆದಿದ್ದಾನೆ. ನಾನು ಕೊಟ್ಟಿರುವ ಈ ಹಣದಲ್ಲಿ ಸೋಂಕಿತರಿಗೆ ಸಹಾಯ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾನೆ.
ಬಾಲಕನ ಸೇವಾ ಮನೋಭಾವದ ಕಂಡು ಸಿಎಂ ಎಂಕೆ ಸ್ಟಾಲಿನ್​ ಅವರಿಗೆ ಮನಸ್ಸು ಕರಾಗಿದ್ದು, ಬಾಲಕನಿಗೆ ಸರ್ಪೈಸ್​ ಒಂದನ್ನು ನೀಡಿದ್ದಾರೆ. ಆತನಿಗೆ ಇಷ್ಟದ ಸೈಕಲ್​ ಅನ್ನು ಅಲ್ಲಿನ ಶಾಸಕರ ಮುಖಾಂತರ ಬಾಲಕನಿಗೆ ಕೊಡಿಸಿದ್ದಾರೆ.
ಭಾನುವಾರ ಬೆಳಗ್ಗೆ ಏಳುತ್ತಿದ್ದಂತೆಯೇ ಮನೆ ಎದುರು ತನ್ನಿಷ್ಟದ ಸೈಕಲ್​ ನೋಡಿದ ಬಾಲಕ ಖುಷಿಯಿಂದ ಕುಣಿದಾಡಿದ್ದಾನೆ. ಸ್ಟಾಲಿನ್​ ಬಾಲಕನೊಂದಿಗೆ ಫೋನ್​ನಲ್ಲಿ ಮಾತನಾಡಿ, ಅವನ ಕೊಡುಗೆಗಾಗಿ ಅವನನ್ನು ಅಭಿನಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss