spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನರಿಯ ಬಾಯಿಂದ ತನ್ನ ಮರಿಗಳನ್ನು ಉಳಿಸಿಕೊಂಡ ಧೈರ್ಯಶಾಲಿ ಬಾತುಕೋಳಿ: ನೆಟ್ಟಿಗರ ಗಮನಸೆಳೆದ ದೃಶ್ಯವಿದು..

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಧೈರ್ಯವಾಗಿದ್ದರೆ ಎಂಥವರನ್ನೂ, ಎಂತಹ ಕಷ್ಟವನ್ನು ಬೇಕಾದರೂ ಎದುರಿಸಹುದು ಎಂಬುದಕ್ಕೆ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಾತುಕೊಳಿಯ ದೃಶ್ಯ ಸಾಕ್ಷಿಯಾಗಿದೆ.

ಹೌದು.. ಈ ಬಾತುಕೋಳಿ ಧೈರ್ಯವಾಗಿ ಬೇಟೆಗಾರ ನರಿಯ ಎದುರು ನಿಂತು ತನ್ನ ಮರಿಗಳನ್ನು ಕಾಪಾಡಿಕೊಳ್ಳುವ ದೃಶ್ಯ ಇದಾಗಿದ್ದು, ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಡಿಯೋದಲ್ಲಿ ಏನಿದೆ?

ಸಣ್ಣ ಕೊಳದಲ್ಲಿ ಎರಡು ದೊಡ್ಡ ಬಾತುಕೋಳಿ ಮತ್ತು ಮರಿಗಳು ಇರುವ ದೃಶ್ಯದ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ. ಬಾತುಕೋಳಿಗಳಿರುವ ಕೊಳೆಕ್ಕೆ ನರಿಯೊಂದು ಬಂದು, ಬಾತುಕೋಳಿಯ ಮರಿಗಳನ್ನು ತಿನ್ನಲು ಪ್ರಯತ್ನಿಸುತ್ತದೆ. ಆದರೆ ತಾಯಿ ಬಾತುಕೋಳಿ ನರಿಗೆ ಒಂದು ಹೆಜ್ಜೆ ಮುಂದಕ್ಕೆ ಇಡಲು ಕೊಡುವುದಿಲ್ಲ. ತನ್ನ ರೆಕ್ಕೆ ಬಿಚ್ಚಿ ನರಿಗೆ ಹೆದರಿಸುತ್ತದೆ. ಈ ಬಾತುಕೋಳಿಯ ಧೈರ್ಯವನ್ನು ನೋಡಿ ನರಿ ಅಲ್ಲಿಂದ ಪರಾರಿಯಾಗುತ್ತದೆ.

52 ಸೆಕೆಂಡಿನ ಈ ವಿಡಿಯೋ ವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss