ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾನು ಸ್ತ್ರೀ ಸಮಾನತಾವಾದಿ ಎನ್ನುತ್ತ ಮದುವೆಯ ದಿನ ವಧುವಿನ ಕೈಯಿಂದ ತಾಳಿ ಕಟ್ಟಿಸಿಕೊಂಡ ವರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಾಮಾನ್ಯವಾಗಿ ಮದುವೆಯಲ್ಲಿ ಹೆಣ್ಣಿಗೆ ಗಂಡು ತಾಳಿ ಕಟ್ಟುತ್ತಾನೆ. ಆದರೆ ಇಲ್ಲಿ ಸ್ವಲ್ಪ ಬದಲಾವಣೆ.. ಇಲ್ಲಿ ಹೆಣ್ಣಿಗೆ ಗಂಡು ತಾಳಿ ಕಟ್ಟುವ ಜತೆ ಗಂಡಿಗೆ ಹೆಣ್ಣೂ ತಾಳಿ ಕಟ್ಟಿದ್ದಾಳೆ.
ಹೌದು, ಶಾರ್ದೂಲ್​ ಕದಮ್​ ಎಂಬ ಹುಡುಗ ಕಾಲೇಜಿನಲ್ಲಿ ಒಟ್ಟಿಗೇ ಓದಿದ್ದ ತನುಜಾಳನ್ನು ಕಾಲೇಜು ಮುಗಿದು ನಾಲ್ಕು ವರ್ಷಗಳ ನಂತರ ಪ್ರೀತಿಸಲು ಆರಂಭಿಸಿದ್ದ. ಪರಸ್ಪರ ಪ್ರೀತಿ ಹಂಚಿಕೊಂಡಿದ್ದ ಜೋಡಿ 2020ರಲ್ಲಿ ಹಸೆಮಣೆ ಏರುವ ನಿರ್ಧಾರ ಮಾಡಿತ್ತು. ಆದರೆ ತನುಜಾ ಬಳಿ ತಾನು ಅಪ್ಪಟ ಸ್ತ್ರೀಸಮಾನತಾವಾದಿ ಎಂದು ಹೇಳಿಕೊಂಡಿದ್ದ ಶಾರ್ದೂಲ್​ , ಮದುವೆಗೆ ಮೊದಲು ಹೊಸ ಹಠ ಹಿಡಿದಿದ್ದಾನೆ. ನಾನು ಮದುವೆಯಾಗುತ್ತೇನೆ, ಆದರೆ ಮದುವೆಯಲ್ಲಿ ನಾನು ನಿನಗೆ ಹೇಗೆ ತಾಳಿ ಕಟ್ಟುತ್ತೇನೋ ಹಾಗೇ ನೀನೂ ನನಗೆ ತಾಳಿ ಕಟ್ಟಬೇಕು ಎಂದು ಹೇಳಿದ್ದಾನೆ.
ಮನೆಯವರು ಎಷ್ಟೇ ಹೇಳಿದರೂ ಶಾರ್ದೂಲ್​ ತನ್ನ ವಾದ ಬಿಟ್ಟುಕೊಟ್ಟಿಲ್ಲ. ಕೊನೆಗೆ ಮನೆಯವರೆಲ್ಲರ ಒಪ್ಪಿಗೆ ಮೇರೆಗೆ ಆತನ ಇಷ್ಟದಂತೆಯೇ ಮದುವೆ ಮಾಡಲಾಗಿದೆ. ತನುಜ ಶಾರ್ದೂಲ್​ಗೆ ತಾಳಿ ಕಟ್ಟಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್ ಆಗಿದೆ.
ಇನ್ನು ಈ ವಿಚಾರವಾಗಿ ಅನೇಕರು ಟ್ರೋಲ್​ ಮಾಡಿದ್ದು, ನೀನು ಅಷ್ಟೊಂದು ಸ್ತ್ರೀ ಸಮಾನತಾವಾದಿ ಆಗಿದ್ದರೆ ಮದುವೆಯಲ್ಲಿ ಸೀರೆ ಉಟ್ಟು ಕೂರಬೇಕಿತ್ತು ಎಂದು ಕಾಲೆಳೆದಿದ್ದಾರೆ.
‘ಹೆಣ್ಣು ಮಕ್ಕಳ ನೋವು ನನಗೆ ಗೊತ್ತು. ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ’ ಎಂದು ಶಾರ್ದೂಲ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮ
ದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದಿನಿಂದ ಇಬ್ಬರೂ ತಮ್ಮ ಮಂಗಲಸೂತ್ರಕ್ಕೆ ಅತ್ಯಂತ ಪವಿತ್ರ ಸ್ಥಾನ ಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss