ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಸ್‌ಚಾಲಕನ‌ ಸಾವಿಗೆ ಕಾರಣರಾದ ಐವರು ಪೊಲೀಸ್ ವಶಕ್ಕೆ‌: ಕೊಲೆ‌ ಕೇಸ್ ದಾಖಲು

ಹೊಸ ದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯ ಜಮಖಂಡಿ ತಾಲ್ಲೂಕಿನ‌ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ. ಬಸ್ ಮೇಲೆ‌ ಕಲ್ಲು ತೂರಿದಾಗ ಬಸ್ ಚಾಲಕನಿಗೆ ಕಲ್ಲೇಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದು ಈ ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.
ಬಸ್ ಚಾಲಕ‌ ನಬೀರ ಅವಟಿ ಸಾವಿಗೆ ಕಾರಣರಾದ ಮಲ್ಲಪ್ಪ ತಳವಾರ , ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ಅರುಣ್ ಅರಕೇರಿ, ಲೋಹಿತ ದಾಸರ ಎಂಬ ಐವರು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಇವರ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಹಾಗೂ ಕೊಲೆ‌ಕೇಸ್ ದಾಖಲು ಮಾಡಲಾಗಿದೆ.ಎಲ್ಲಾ ಆಯಾಮದಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಪೂರ್ವ ನಿಯೋಜಿತ ಪಿತೂರಿಯಾಗಿದೆ.‌ಬಸ್ ಚಾಲನೆ ಮಾಡುವಾಗ ನಾವೆಲ್ಲಾ ಮುಷ್ಕರ ನಡೆಸುತ್ತಿದ್ದೇವೆ ಬಹಿಷ್ಕಾರ ಹಾಕಿದ್ದೇವೆ ಆದರೂ ಬಸ್ ಓಡಿಸುತ್ತಿದ್ದೀರಿ ಎಂದು ಚಾಲಕನ ಗುರಿಹಿಟ್ಟು ಕಲ್ಲು ಎಸೆದಿದ್ದಾರೆ. ಕಲ್ಲು ಚಾಲಕನನಿಗೆ ಬಡಿದ ಪರಿಣಾಮ ಚಾಲಕ‌ಅವಟಿ ಸಾವನ್ನಪ್ಪಿದರು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss