Wednesday, August 10, 2022

Latest Posts

ಬಸ್ ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು 52 ಮಂದಿ ಪ್ರಾಣ!

ದಿಗಂತ ವರದಿ ಮುಂಡಗೋಡ:

ತಾಲೂಕಿನ ಮಳಗಿಯ ಹುಡೆಲಕೊಪ್ಪ ಗ್ರಾಮದ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿ 52 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಮಳಗಿಯ ಹುಡೆಲಕೊಪ್ಪ ಗ್ರಾಮದ ಹತ್ತಿರ ಶಿರಶಿಯಿಂದ-ಮುಡಗೋಡ ಮಾರ್ಗವಾಗಿ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಎದುರಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರನ್ನು ತಪ್ಪಿಸಲು ಹೋಗಿದ್ದಾನೆ. ಆ ಸಂದರ್ಭದಲ್ಲಿ ಬಸ್ಸಿನ ಬ್ರೇಕ್ ಪೇಲ್ ಆಗಿದೆ ಎಂದು ತಿಳಿದುಬಂದಿದೆ. ಇದನ್ನು ಮನಗಂಡ ಚಾಲಕ ಅವಘಡವನ್ನು ತಪ್ಪಿಸಲು ರಸ್ತೆ ಪಕ್ಕದ ಕಂದಕಕ್ಕೆ ಇಳಸಿದ್ದಾನೆ. ಬಸ್ಸಿನಲ್ಲಿ ಸುಮಾರು ೫೩ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಅದೃಷ್ಟವಶಾತ್ ಯಾರಿಗೂ ಗಾಯನೋವು ಸಂಭವಿಸಿಲ.್ಲ ಆದರೆ ಈ ಅವಘಡದಿಂದ ಬಸ್ಸಿನ ಮುಂಬಾಗ ಜಖಂವಾಗಿದೆ. ಒಟ್ಟಿನಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss