300 ಅಡಿ ಎತ್ತರದಿಂದ ಹಾರಿಬಿತ್ತು ಕಾರ್, ದಂಪತಿ ಪ್ರಾಣ ಉಳಿಸಿದ್ದು ಫೋನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಕ್ಯಾಲಿಫೋರ್ನಿಯಾದ ಏಂಜಲೀಸ್ ಫಾರೆಸ್ಟ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಕಾರು ಪರ್ವತದಿಂದ 300 ಅಡಿ ಕೆಳಗೆ ಬಿದ್ದಿದೆ.
ಗುಡ್ಡದ ಮಧ್ಯೆ ಕಾರು ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಮೊಬೈಲ್‌ನಲ್ಲಿ ನೆಟ್‌ವರ್ಕ್ ಇರಲಿಲ್ಲ. ಐಫೋನ್ ೧೪ನಲ್ಲಿ ಇರುವ ವಿಶಿಷ್ಟ ಸೌಲಭ್ಯದಿಂದ ದಂಪತಿಯ ಪ್ರಾಣ ಉಳಿದಿದೆ.
ಐಫೋನ್‌ನಲ್ಲಿ ಕ್ರ್ಯಾಶ್ ಡಿಕೆಕ್ಷನ್ ಸೌಲಭ್ಯ ಇದೆ. ಕಾರಿಗೆ ಅಪಘಾತವಾಗಿದ್ದನ್ನು ಪತ್ತೆ ಹಚ್ಚಿ, ತುರ್ತು ಸಂಖ್ಯೆಗೆ ಸಂದೇಶ ರವಾನಿಸುತ್ತದೆ. ಇದನ್ನು ಸ್ಯಾಟಿಲೈಟ್ ಎಸ್‌ಒಎಸ್ ಎನ್ನುತ್ತಾರೆ.

ಈ ಸೌಲಭ್ಯ ಬಳಸಿ ಫೋನ್ ರಕ್ಷಣಾ ತಂಡವನ್ನು ತಲುಪಿದೆ. ಉಪಗ್ರಹ ವೈಶಿಷ್ಟ್ಯವು ಆಪಲ್ ರಿಲೇ ಸೆಂಟರ್‌ಗೆ ಸಂದೇಶ ಕಳಿಸಿದೆ. ನಂತರ ಕೌಂಟಿ ಶೆರಿಫ್‌ಗೆ ಮಾಹಿತಿ ಹೋಗಿದ್ದು, ದಂಪತಿಯನ್ನು ರಕ್ಷಿಸಲಾಗಿದೆ.
ಮಾಂಟ್ರೋಸ್ ಸಂಶೋಧನೆ ಮತ್ತು ಪಾರುಗಾಣಿಕೆ ತಂಡ ಈ ವಿಷಯವನ್ನು ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!