ಪ್ರತಿಭಟನೆಗೆ ಮಣಿದ ಚೀನಾ ಸರಕಾರ: ಕೋವಿಡ್-19 ನಿರ್ಬಂಧಗಳು ಮತ್ತಷ್ಟು ಸಡಿಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಚೀನಾದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಹೇರಲಾಗಿದ್ದ ಅತ್ಯಂತ ಕಠಿಣ ಕೋವಿಡ್ ನಿರ್ಬಂಧಗಳ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದ ಹಿನ್ನೆಲೆಸರ್ಕಾರ ಬಹಳಷ್ಟು ನಗರಗಳಲ್ಲಿ ನಿರ್ಬಂಧಗಳನ್ನು ಬುಧವಾರ ಸಡಿಲಗೊಳಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೋವಿಡ್ ಪಾಸಿಟಿವ್ ವರದಿಯಾದಾಗ ಸಂಪೂರ್ಣ ಜಿಲ್ಲೆಗಳು ಮತ್ತು ನೆರೆಹೊರೆಗಳಿಗೆ ಸಂಪೂರ್ಣ ಲಾಕ್ಡೌನ್ ಹೇರುವ ಬದಲಾಗಿ ಪ್ರತ್ಯೇಕ ಅಪಾರ್ಟ್ಮೆಂಟ್ ಮಹಡಿಗಳು ಮತ್ತು ಕಟ್ಟಡಗಳಿಗೆ ಸೀಮಿತಗೊಳಿಸುವುದಾಗಿ ಹೇಳಿದೆ. ದೇಶದಲ್ಲಿ ಹೇರಲಾಗಿದ್ದು ಶೂನ್ಯ ಕೋವಿಡ್ ನೀತಿಯ ವಿರುದ್ಧ ನಡೆದ ಪ್ರತಿಭಟನೆಗಳ ಬಳಿಕ ಇದೀಗ ಕಠಿಣ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

ಕಳೆದ ತಿಂಗಳು ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಕಠಿಣ ಕೋವಿಡ್ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಕಠಿಣ ನಿರ್ಬಂಧಗಳಿಂದ ಬೇಸತ್ತಿದ್ದ ಜನ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ವಿರುದ್ಧ ಪ್ರತಿಭಟನೆಗಳನ್ನು ಮಾಡಿ, ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂಬ ಒತ್ತಡ ಹೇರಿದ್ದರು.

ಇದೀಗ ಕೋವಿಡ್ ಪರೀಕ್ಷೆ ಇಲ್ಲದೇ ಜನ ಓಡಾಡುತ್ತಿದ್ದಾರೆ. ಚೀನಾದ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಈವರೆಗೆ ಇದ್ದ ಕೋವಿಡ್ ಪರೀಕ್ಷೆಯ ನಿಯಮಗಳನ್ನು ಡಿ. 6ರಿಂದ ತೆಗೆದುಹಾಕಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!