ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದು, ಕೊರೋನಾದಿಂದ ತಪ್ಪಿಸಿಕೊಳ್ಳಲು ಜನ ಮನೆಯೊಳಗೆ ಕೂತಿದ್ದಾರೆ.
ಈ ಮಧ್ಯೆ ಗಾಯಕಿಯೊಬ್ಬರು ಬೇಕು ಬೇಕಂತಲೇ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಚೀನಾದ ಫೇಮಸ್ ಸಿಂಗರ್ ಜೇನ್ ಜಾಂಗ್ ಕೊರೋನಾ ತರಿಸಿಕೊಂಡ ಗಾಯಕಿ. ಗೆಳೆಯನಿಗೆ ಕೊರೋನಾ ಇದ್ದದ್ದು ಗೊತ್ತಾಗಿ ಅವರ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡಿದ್ದಾರೆ.
ಹೊಸ ವರ್ಷದ ಹಿನ್ನೆಲೆ ಡಿಸೆಂಬರ್ ಕೊನೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿದ್ದು, ಆಗ ಕೊರೋನಾ ಬಂದರೆ ಕಾರ್ಯಕ್ರಮ ನಡೆಸಲು ಆಗುವುದಿಲ್ಲ. ಹಾಗಾಗಿ ಕೊರೋನಾ ಈಗಲೇ ಬಂದರೆ ಇನ್ನು ಸ್ವಲ್ಪ ದಿನ ಬರೋದಿಲ್ಲ ಎನ್ನೋ ಲೆಕ್ಕಾಚಾರದಲ್ಲಿ ಈಕೆ ಹೀಗೆ ಮಾಡಿದ್ದಾರೆ. ಅಲ್ಲದೇ ಯಾವುದೇ ಔಷಧ ಇಲ್ಲದೆ ನೀರು, ವಿಟಮಿನ್ ಸಿನಿಂದ ರೋಗ ಓಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕೋವಿಡ್ ತಮಾಷೆಯ ವಿಷಯ ಅಲ್ಲ, ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಈ ವಿಷಯದಲ್ಲಿ ತಮಾಷೆ ಮಾಡೋದು ತಪ್ಪು ಎಂದು ನೆಟ್ಟಿಗರು ದೂರಿದ್ದಾರೆ.