ಭಯದ ವಾತಾವರಣ ಜನರಿಗಲ್ಲ, ಕಾಂಗ್ರೆಸ್‌ಗೆ : ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ

ಹೊಸದಿಗಂತ ವರದಿ ವಿಜಯನಗರ:

ಭಯದ ವಾತಾವರಣ ಇರೋದು ಸಿದ್ದರಾಮಯ್ಯ ಗೆ ಹಾಗೂ ಕಾಂಗ್ರೆಸ್ ಗೆ, ಜನರಿಗಲ್ಲ, ನಾಡಿನ ಜನರು ನೆಮ್ಮದಿಯಿಂದ ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆ ಸಮಾರಂಭದಲ್ಲಿ ಬುಧವಾರ ಮಾತನಾಡಿದರು. ಭಯದ ವಾತಾವರಣ ಸೃಷ್ಟಿಯಾಗಿದೆ ಎನ್ನುವ ಕಾಂಗ್ರೆಸ್ ನವರು, ಸುಮಾರು 50 ಆಡಳಿತದಲ್ಲಿ ನೀವು ರಾಜ್ಯದ ಜನರಿಗೆ ಕೊಟ್ಟ ಕೊಡುಗೆ ಏನು, 50ವರ್ಷ ಆಡಳಿತ ನಡೆಸಿದವರಿಂದ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪುಸಲು ಆಗಲಿಲ್ಲ, ಎಸ್ಸಿ ಹಾಗೂ ಎಸ್ಟಿ ಅವರಿಗೆ ಶಿಕ್ಷಣ, ಉದ್ಯೋಗ ಕೊಡಲು ಆಗಲಿಲ್ಲ, ಬರೀ ಸುಳ್ಳು ಭರವಸೆ ನೀಡಿ ಅವರಿಂದ ಮತ ಪಡೆದು ಕತ್ತಲಲ್ಲೇ ಇಟ್ಟಿದ್ರಿ, ನಾವು ಅವರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ, ಇದಕ್ಕೂ ಕೈ ನಾಯಕರು ಅಪಪ್ರಚಾರ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಬೆಕ್ಕಲ್ಲ, ಎಂತಹ ಹುಲಿ ಅಡ್ಡ ಬಂದರೂ ಮೀಸಲಾತಿ ವಿಚಾರದಲ್ಲಿ ಹಿಂದೆ ಸರಿಯಲ್ಲ ಎಂದರು.

ವೀರಶೈವ ಲಿಂಗಾಯತರನ್ನು ಒಡೆಯಲು ಮುಂದಾದ ಸಿದ್ದರಾಮಯ್ಯ ಗೆ ಭಯವಿದೆ, ಇಬ್ಬಾಗಕ್ಕೆ ಪ್ರಯತ್ನ ಮಾಡಿದ್ರಿ, ಧರ್ಮ ಒಡೆಯವ ಕೆಲಸ ನಮ್ಮ ಸರ್ಕಾರದಲ್ಲಿಲ್ಲ, ಸಿದ್ದರಾಮಯ್ಯ ಅವರ ಅವದಿಯಲ್ಲಿ ಜನರು‌ ಭಯದಲ್ಲಿದ್ದರು, ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ, ಸಿದ್ದರಾಮಯ್ಯ ಗೆ ನೈತಿಕ ತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಬ್ರಷ್ಟಾಚಾರದ ‌ಪಿರಾಮಹ, ಅವಧಿಯಲ್ಲಿ ಹಾಸಿಗೆ, ದಿಂಬುನಲ್ಲೂ ಬಿಡಲಿಲ್ಲ, ಅವದಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಕೊಡುಗೆ ಶೂನ್ಯ, ಅಭಿವೃದ್ಧಿಗೆ ಸಂಪೂರ್ಣ ನಿರ್ಲಕ್ಷ್ಯ, ನಮ್ಮ ಅವದಿಯಲ್ಲಿ ಯಾವುದೇ ಬಯವಿಲ್ಲ, ಯೋಜನೆ ಮೂಲಕ ಹಣ ಬಳಕೆ ಮಾಡಿ ಜನರ ವಿಶ್ವಾಸಗಳಿಸಿದ್ದೇವೆ, ಸಿದ್ದರಾಮಯ್ಯ ಅವಧಿಯಲ್ಲಿ ರೈತರಿಗೆ ಭಯವಿತ್ತು, ಬೆಳೆ ಹಾನಿಯಾದರೇ ವರ್ಷ ಕಾದರೂ ಪರಿಹಾರ ಬರತಿರಲಿಲ್ಲ, ನಮ್ಮ‌ಅವದಿಯಲ್ಲಿ ಹಾನಿಯಾದ ಒಂದೂವರೆ ತಿಂಗಳಲ್ಲಿ‌ ರೈತರ ಖಾತೆಗೆ ಪರಿಹಾರ ಹಣ ಜಮಾವಣೆಯಾಗುತ್ತಿದೆ ಎಂದರು.

ಸಿದ್ದರಾಮಯ್ಯ ಅವದಿಯಲ್ಲಿ ಬ್ರಷ್ಟಾಚಾರ ತಾಂಡವಾಡುತ್ತಿತ್ತು, ಎಲ್ಲಿ ಹಿಂದಿನ ಹಗರಣಗಳು ನಮ್ಮ ಮೇಲೆ ಬರಲಿವೆ ಎಂದು ಲೊಕಾಯುಕ್ತ ಸಂಸ್ಥೆಯನ್ನೇ ಮುಚ್ಚು ಹಾಕಿ, ಎಸಿಬಿಯನ್ನು ಮಾಡಿದರು. ನಾವು ಅಧಿಕಾರಕ್ಕೆ ಬಂದ ಬಳಿಕ ಲೊಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದೇವೆ, ನಾವಲ್ಲ ಯಾರೇ ಬ್ರಷ್ಟಾಚಾರ ದಲ್ಲಿ ಭಾಗಿಯಾದರೇ ಖಂಡಿತ ತನಿಖೆ ಎದುರಿಸಬೇಕಿದೆ ಎಂದರು. ದೇಶವನ್ನು ಒಡೆದಿದ್ದೇ ಕಾಂಗ್ರೆಸ್, ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ, ರಾಹುಲ್ ಗಾಂಧಿಗೆ ಭಾರತ್ ಜೋಡೋ ಅಲ್ಲ, ಸಿದ್ದರಾಮಯ್ಯ, ಡಿಕೇಶಿಯನ್ನು ಜೊಡಿಸುವದರಲ್ಲೇ ಸುಸ್ತಾಗಿದ್ದಾರೆ. ಇತಿಹಾಸ ತಿಳಿಯದೇ ಸಿದ್ದರಾಮಯ್ಯ ಮನಬಂದಂತೆ ಮಾತಾಡ್ತಾರೆ, ಅದಕ್ಕೆ ಜನರೇ ಉತ್ತರ ಕೊಡಲಿದ್ದಾರೆ, ಕೇಂದ್ರದ ಮೋದಿಜೀ ಹಾಗೂ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಂದ ಕಾಂಗ್ರೆಸ್ ನವರಿಗೆ ರಾಜಕೀಯವಾಗಿ ಭಯ ಶುರುವಾಗಿದೆ, ನಮ್ಮ ಜನಪರ ಕಾರ್ಯಕ್ರಮಗಳಿಂದ ರಾಜ್ಯವಷ್ಟೇ ಅಲ್ಲ, ದೇಶದ್ಯಾಂತ ಜನಬೆಂಬಲ ವ್ಯಕ್ತವಾಗಿದೆ. ಮುಂಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ 150ಕ್ಕು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾದಿಸುವ ಮೂಲಕ ಮತ್ತೋಮ್ಮೆ ರಾಜ್ಯದಲ್ಲಿ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!