Sunday, February 5, 2023

Latest Posts

ನಾಲ್ಕು ವರ್ಷಗಳ ಸಂಬಳವನ್ನು ಬೋನಸ್ ಆಗಿ ಕೊಡ್ತು ಕಂಪನಿ: ಉದ್ಯೋಗಿಗಳಿಗೆ ಅದೃಷ್ಟವೋ ಅದೃಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಕಂಪನಿಯಲ್ಲಿ ಕೆಲಸ ಮಾಡೋ ಉದ್ಯೋಗಿಗಳು ಅದೃಷ್ಟ ಮಾಡಿರೋದಂತೂ ಸುಳ್ಳಲ್ಲ. ಈ ಕಂಪನಿ ತನ್ನ ಉದ್ಯೋಗಿಗಳಿಗೆ ನಾಲ್ಕು ವರ್ಷದ ಸಂಬಳವನ್ನು ಬೋನಸ್ ಆಗಿ ನೀಡಿದೆ!

ಹೌದು, ತೈವಾನ್ ಎವರ್‌ಗ್ರೀನ್ ಮರೈನ್ ಕಾರ್ಪೋರೇಷನ್ ಹೊಸ ವರ್ಷದ ಖುಷಿಗೆ ತನ್ನ ಉದ್ಯೋಗಿಗಳಿಗೆ ಭಾರೀ ಗಿಫ್ಟ್ ನೀಡಿದೆ. ತೈವಾನ್ ಮೂಲದ ಶಿಪ್ಪಿಂಗ್ ಕಂಪನಿ ವರ್ಷಾಂತ್ಯದ ಬೋನಸ್ ಘೋಷಣೆ ಮಾಡಿದ್ದು, 50 ತಿಂಗಳ ಸಂಬಳ ಒಟ್ಟಿಗೇ ಸಿಗೋ ಖುಷಿಯಲ್ಲಿ ಉದ್ಯೋಗಿಗಳು ಕುಣಿದು ಕುಪ್ಪಳಿಸಿದ್ದಾರೆ. ತೈವಾನ್ ಆಧಾರಿತ ಒಪ್ಪಂದಗಳನ್ನು ಹೊಂದಿರುವ ಸಿಬ್ಬಂದಿಗಳಿಗೆ ಮಾತ್ರ ಬೋನಸ್ ಅನ್ವಯಿಸುತ್ತದೆ.

Shipping Firm Evergreen Pays 52 Months' Salary As Bonus To Employeesವರ್ಷಾಂತ್ಯದ ಬೋನಸ್ ಯಾವಾಗಲೂ ಕಂಪನಿಯ ವರ್ಷದ ಕಾರ್ಯಕ್ಷಮತೆ ಮತ್ತು ಉದ್ಯೋಗಿಗಳು ವೈಯಕ್ತಿಕವಾಗಿ ಕಾರ್ಯನಿರ್ವಹಿಸಿದ ನೀತಿ ಅನುಸಾರ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಈ ಬೋನಸ್ ಎಲ್ಲರಿಗೂ ಸಿಕ್ಕಿಲ್ಲ, ಶಾಂಘೈ ಮೂಲದ ಉದ್ಯೋಗಿಗಳು ತಮ್ಮ ಮಾಸಿಕ ಸಂಬಂಳದ ಐದರಿಂದ ಎಂಟು ಪಟ್ಟು ಬೋನಸ್ ಪಡೆದಿದ್ದಾರೆ. ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ನೀತಿ ಬಗ್ಗೆ ಉದ್ಯೋಗಿಗಳು ಗರಂ ಆಗಿದ್ದಾರೆ. ಇನ್ನು ಹಲವರು ಕೆಲಸ ಬಿಡಲು ತಯಾರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!