ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್ನಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆನೆಟ್ ಚುನಾವಣೆಯಲ್ಲಿ ಇಮ್ರಾನ್ ಆಪ್ತ ವಿತ್ತ ಸಚಿವ ಸೋಲು ಕಂಡ ಹಿನ್ನೆಲೆಯಲ್ಲಿ ಇಮ್ರಾನ್ ವಿಶ್ವಾಸಮತ ಯಾಚಿಸಬೇಕೆಂದು ಸೂಚಿಸಲಾಗಿತ್ತು.
ಇತ್ತ ವಿರೋಧ ಪಕ್ಷಗಳು ಪ್ರಧಾನಿ ಇಮ್ರಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಟೀಕಿಸಿದ್ದರು.
ಇಸ್ಲಾಮಿಕ್ ಸಂವಿಧಾನದ 91 ನೇ ವಿಧಿಯ 7 ನೇ ವಿಧಿಯ ಅಡಿಯಲ್ಲಿ ಪ್ರಧಾನಿ ವಿಶ್ವಾಸ ಮತ ಯಾಚಿಸಿದ ಇಮ್ರಾನ್ ಗೆದ್ದಿದ್ದಾರೆ. ಈ ಹಿಂದೆ ಬೆನಿಜಿರ್ ಭಟ್ಟೋ,ಸವಾಜ್ ಷರೀಫ್,ಚೌಧರಿ ಸುಜಾತ್,ಶೌಕತ್ ಅಜೀಜ್, ಜಫರುಲ್ಲಾ ಜಮಾಲಿ,ಯುಸೂಫ್ ರಾಜಾ ಗಿಲಾನಿ ಸಹ ವಿಶ್ವಾಸ ಮತ ಯಾಚಿಸಿದ್ದರು.