37ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ: ಇಂದು ಆಂಧ್ರಪ್ರದೇಶದಲ್ಲಿ ಪರ್ಯಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ 37ನೇ ದಿನಕ್ಕೆ ಕಾಲಿಟ್ಟಿದೆ. ಇಂದು ರಾಹುಲ್ ಗಾಂಧಿಯವರ ಪಾದಯಾತ್ರೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ರಾಂಪುರದಿಂದ ಆಂಧ್ರಪ್ರದೇಶಕ್ಕೆ ತಲುಪಿದೆ. ಎಪಿಯ ಅನಂತಪುರ ಜಿಲ್ಲೆಯ ಜಾಜಿರಕಲ್ಲು ಟೋಲ್ ಪ್ಲಾಜಾ ತಲುಪಲಿದೆ. ಸಂಜೆ 04.30ಕ್ಕೆ ಋಉರುವಾಗುವ ಪಾದಯಾತ್ರೆ ಸಂಜೆ 6.30ಕ್ಕೆ ಅನಂತಪುರ ಜಿಲ್ಲೆಯ ಓಬುಳಾಪುರಂ ಗ್ರಾಮದಲ್ಲಿ ಕೊನೆಯಾಗಲಿದೆ.

ಪುನಃ ಕರ್ನಾಟಕದ ಬಳ್ಳಾರಿಯ ಹಲಕುಂದಿ ಮಠದ ಬಳಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ರಾಹುಲ್ ಗಾಂಧಿ ಮತ್ತು ಭಾರತ್ ಜೋಡೋ ಯಾತ್ರಿಕರನ್ನು ಸ್ವಾಗತಿಸಲು ಎಪಿ ಕಾಂಗ್ರೆಸ್ ನಾಯಕರು ವ್ಯವಸ್ಥೆ ಮಾಡಿದ್ದಾರೆ.

ಎಪಿ ಕಾಂಗ್ರೆಸ್ ಅಧ್ಯಕ್ಷ ಶೈಲಜಾನಾಥ್, ಮಾಜಿ ಕೇಂದ್ರ ಸಚಿವ ಜೆ.ಡಿ.ಶೀಲಂ, ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಕೆ.ರಾಜು, ಎಐಸಿಸಿ ಕಾರ್ಯದರ್ಶಿ ರುದ್ರರಾಜು, ಎಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಗುರ್ನಾಥ್ ರಾವ್ ಅವರು ರಾಹುಲ್ ಗಾಂಧಿ ಪಾದಯಾತ್ರೆಯ ಮಾರ್ಗದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಭಾರತ್ ಜೋಡೋ ಯಾತ್ರೆಯು ಎಪಿಯಲ್ಲಿ 5 ದಿನಗಳ ಕಾಲ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!