ಹೊಸ ದಿಗಂತ ವರದಿ, ಕೋಲಾರ:
ರಾಜ್ಯದಲ್ಲಿ ಮಂದಿನ ೨೦೨೩ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಗದ್ದುಗೆ ಹಿಡಿಯಲಿದೆ, ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ.ನಮ್ಮಲ್ಲಿ ಇರೋದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಸಿಎಂ ಗಾಧಿಗಿ ಯಾವುದೇ ಪೈಪೋಟಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಟ್ಟಿರುವ ಅವರು ಸೋಮವಾರ ಮೂಡಣ ಬಾಗಿಲು ಮುಳಬಾಗಲು ತಾಲೂಕಿನ ಕುರುಡುಮಲೆಯ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ರಣಕಹಳೆ ಮೊಳಗಿಸಿದರು.
ಇಡೀ ದಿನ ಕೋಲಾರ ಜಿಲ್ಲೆಯ ಕುರುಡುಮಲೆ, ಆಂಜನೇಯಸ್ವಾಮಿ ದೇವಾಲಯ, ದರ್ಗಾಗೆ ಭೇಟಿ ನೀಡಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಸ್ ಎಂ ರವರು ಕಾಂಗ್ರೆಸ್ ಅಧ್ಯಕ್ಷ್ಷರಾಗಿದ್ದಾಗ ಕುರುಡುಮಲೆಯ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಪಾಂಚಜನ್ಯ ಮೊಳಗಿಸಿದ್ದರು.ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ವಿನಾಯಕನ ದರ್ಶನ ಪಡೆದು ರಾಜ್ಯಕ್ಕೆ ಆಗುತ್ತಿರುವ ಅನೇಕ ವಿಘ್ನಗಳನ್ನು ನಿವಾರಿಸಲು ದೇವರ ಬಳಿ ಕೇಳಿಕೊಂಡಿದ್ದಾನೆ ಎಂದರು.
ರಾಜ್ಯಕ್ಕೆ ಮಳೆ ಬೆಳೆ ಎಲ್ಲವು ಆಗಲಿ,ರಾಜ್ಯಕ್ಕೆ ಹಿಡಿದಿರುವ ವಿಘ್ನ ಗಳನ್ನು ವಿನಾಯಕ ನಿವಾರಣೆ ಮಾಡುವ ನಂಬಿಕೆ ಇದೆ ಎಂದರು.
ಮಾ.೩ ರಿಂದ ಯಾತ್ರೆ ಪಕ್ಷ ಸಂಘಟನೆ
ಬಿಜೆಪಿ ಮುಂದೆ ಅಧಿಕಾರಕ್ಕೆ ಬರೋಲ್ಲವೆಂದು ಜನರಿಗೆ ಅರ್ಥವಾಗಿದೆ. ನಾನು ಅಧಿಕಾರ ಹಿಡಿಯುವುದಲ್ಲ, ರಾಜ್ಯದ ಜನತೆ ಅಧಿಕಾರ ಹಿಡಿಯುತ್ತಾರೆ, ಮಾ.೩ ರಿಂದ ನಮ್ಮ ಯಾತ್ರೆ ಆರಂಭವಾಗಲಿದ್ದು, ಮೊದಲು ದೇವನಹಳ್ಳಿ ಯಿಂದ ಆರಂಭಿಸಿ ಈ ವರ್ಷದಲ್ಲಿ ನೂರು ವಿಧಾನ ಸಭೆ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದರು.
ಎಲ್ಲಿ ನಾವು ಸೋತಿದ್ದೇವೆ ಅಲ್ಲಿ ಪ್ರವಾಸ ಮಾಡುತ್ತೇವೆ, ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡುತ್ತೇವೆ.ಮೂರು ಉಪಚುನಾವಣೆಗಳು ಸಹ ಮುಂದಿವೆ ಆದ್ದರಿಂದ ಅದನ್ನು ನೋಡಿಕೊಂಡು ತಯಾರಿ ಮಾಡುತ್ತೇವೆ.ಸಾರಾ ಮಹೇಶ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ನಮಗೆ ಅವರು ಮಾತು ಕೊಟ್ಟಿದ್ದರು. ಹಿಂದೆ ಮಾತನಾಡಿದ್ದೇವೆ, ಈ ವರ್ಷ ಮೈಸೂರು ಮೇಯರ್ ಸ್ಥಾನ ಬಿಟ್ಟುಕೊಡಬೇಕಿತ್ತು.
ಹೊಂದಾಣಿಕೆ ಮುಂದುವರೆಯಬೇಕಿತ್ತುಮ ಅದನ್ನು ಜೆಡಿಎಸ್ರವರು ನಡೆಸಿಕೊಡಬೇಕಿತ್ತು. ಅವರ ಮೇಲೆ ನಂಬಿಕೆ ಇತ್ತು ಎಂದರು. ಮೇಯರ್ ವಿಚಾರವಾಗಿ ತನ್ವೀರ್ ಸೇಠ್ ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.
ಸಿದ್ದರಾಮಯ್ಯ ದೆಹಲಿ ಭೇಟಿ ಅದು ಮದುವೆಗೆ ಹೋಗಿದ್ದಾರೆ. ನಾನೂ ಹೋಗಬೇಕಿತ್ತು. ನನಗೆ ಮನೆಯಲ್ಲಿ ಕಾರ್ಯಕ್ರಮ ಇತ್ತು. ಹಾಗಾಗಿ ಹೋಗಲಿಲ್ಲ ಅದಕ್ಕೆ ವಿಶೇಷ ಅರ್ಥ ಬೇಡ,ಮೇಯರ್ ಚುನಾವಣೆ ಎನ್ನುವುದು ಒಂದು ಲೋಕಲ್ ಇಶ್ಯುಅಷ್ಟೇ ಇದೆಲ್ಲ ಅಲ್ಲಲ್ಲಿಯೇ ತೀರ್ಮಾನ ಆಗುತ್ತದೆ.ನಮ್ಮಲ್ಲಿ ಯಾವ ಬೇರೆ ಬೇರೆ ದಾರಿಗಳೂ ಇಲ್ಲ.ನಾವೆಲ್ಲ ಒಗ್ಗಟ್ಟಾಗಿದ್ದೇವೆ.ನಮ್ಮ ದಾರಿ ಕಾಂಗ್ರೆಸ್ ದಾರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಜಿಲ್ಲೆಯ ಹಲವಾರು ಕಾಂಗ್ರೆಸ್ ಮುಖಂಡರು ಹಾಜರಿದ್ದರು.