ಐಷಾರಾಮಿ ಅವಳಿ ಗೋಪುರ ಧರೆಗುರುಳಲು ಶುರುವಾಗಿದೆ ಕ್ಷಣಗಣನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದಿಲ್ಲಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ನೋಯ್ಡಾದಲ್ಲಿ ಎಮರಾಲ್ಡ್ ಕೋರ್ಟ್ ಪ್ರಾಜೆಟ್‌ನಲ್ಲಿರುವ ಸೂಪರ್‌ಟೆಕ್ ನಿರ್ಮಿಸಿರುವ ಐಷಾರಾಮಿ ಅವಳಿ ಗೋಪುರಗಳು ಧರೆಗುರುಳಲು ಕ್ಷಣ ಗಣನೆ ಆರಂಭವಾಗಿದೆ. ಇಂದು ಈ ಘಟನೆಗೆ ನೋಯ್ಡಾ ಸಾಕ್ಷಿಯಾಗಲಿದೆ. ಒಟ್ಟು 40 ಅಂತಸ್ತುಗಳುಳ್ಳ ಕಟ್ಟಡಗಳು ಅಕ್ರಮವಾಗಿ ನಿರ್ಮಾಣಗೊಂಡ ಹಿನ್ನೆಲೆ ಅವಳಿ ಕಟ್ಟಡವನ್ನು ಧ್ವಂಸ ಗೊಳಿಸಲು ಸುಪ್ರೀಂ ಕೋರ್ಟ್ ಆ. 28ರವರೆಗೆ ಗಡುವು ವಿಸ್ತರಿಸಿತ್ತು.

ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ಗೆ ಹತ್ತಿರದಲ್ಲಿರುವ ನೋಯ್ಡಾದ 93- ಎ ಸೆಕ್ಟರ್‌ನಲ್ಲಿ ಸೂಪರ್‌ಟೆಕ್ 40 ಅಂತಸ್ತಿನ ಬೃಹತ್ ಅವಳಿ ಕಟ್ಟಡಗಳನ್ನು ನಿರ್ಮಿಸಿದೆ. ಇದರಲ್ಲಿ ಒಂದರ ಎತ್ತರ 103 ಮೀಟರ್‌ಗಳಾಗಿದ್ದರೆ, ಮತ್ತೊಂದು 97 ಮೀಟರ್ ಎತ್ತರವಿದೆ. ಈ ಎರಡೂ ಕಟ್ಟಡಗಳು ಒಟ್ಟು 7.5 ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿವೆ. ಆದರೆ, ಕಟ್ಟಡಗಳ ನಡುವೆ ಅತ್ಯಂತ ಕಡಿಮೆ ಅಂತರವಿದ್ದು, ಕಟ್ಟಡ ನಿರ್ಮಾಣ ನಿಯಮಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಉತ್ತರ ಪ್ರದೇಶದ ಅಪಾರ್ಟ್‌ಮೆಂಟ್ ಕಾಯ್ದೆಯಲ್ಲಿ ಸೂಚಿಸಿರುವಂತೆ ನಿವೇಶನಗಳ ಮಾಲೀಕರ ಒಪ್ಪಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿದೆ. ಹೀಗಾಗಿ 2021ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಈ ಕಟ್ಟಡಗಳ ಧ್ವಂಸಕ್ಕೆ ಆದೇಶ ನೀಡಿತ್ತು. ಅಸಲಿಗೆ ಅವಳಿ ಕಟ್ಟಡಗಳನ್ನು ಮೇ 22ರ ವೇಳೆಗೆ ಧ್ವಂಸಗೊಳಿಸಬೇಕಿತ್ತು. ಆದರೆ, ಆ ಗಡುವನ್ನು ಇಲ್ಲಿಯವರೆಗೆ ಮುಂದೂಡಲಾಗಿತ್ತು.

3,700 ಕೆಜಿ ಸ್ಫೋಟಕ ಬಳಕೆ

ಧ್ವಂಸ ಪ್ರಕ್ರಿಯೆಯಲ್ಲಿ ಮೊದಲಿಗೆ ಕಟ್ಟಡಗಳನ್ನು ಸುಪರ್ದಿಯನ್ನು ಕೈಗೊಳ್ಳಲಾಗುತ್ತದೆ. ಅದರಂತೆ, 3,700 ಕೆಜಿಯ ಸ್ಫೋಟಕಗಳನ್ನು ಗೋಪುರಗಳ ಕಾಂಕ್ರೀಟ್‌ನೊಳಗೆ 9,000 ರಂಧ್ರಗಳನ್ನು ಕೊರೆದು ತುಂಬಿಸಲಾಗುತ್ತದೆ. ಆ. 2 ರಂದು ಅವಳಿ ಗೋಪುರಗಳ ಧ್ವಂಸ ಪ್ರಕ್ರಿಯೆ ನಡೆಯಬೇಕಿತ್ತು. ಕಟ್ಟಡಗಳನ್ನು ಧ್ವಂಸಗೊಳಿಸುವ ಪ್ರಕ್ರಿಯೆಯನ್ನು ಸೂಪರ್‌ಟೆಕ್, ಮುಂಬೈ ಮೂಲದ ಎಡಿಫೈಸ್ ಇಂಜಿನಿಯರಿಂಗ್‌ನೊಂದಿಗೆ ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!