ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಕಡಿಮೆ ಮಕ್ಕಳು ಹೊಂದಿದವರಿಗೆ ಸರ್ಕಾರದ ಸೌಲಭ್ಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಉತ್ತರ ಪ್ರದೇಶದ ಕಾನೂನು ಆಯೋಗವು ಕಡಿಮೆ ಮಕ್ಕಳನ್ನು ಹೊಂದಿದವರಿಗೆ ಮಾತ್ರವೇ ಸರ್ಕಾರದ ಸೌಲಭ್ಯ ಸಿಗುವಂತೆ ಕಾನೂನು ಜಾರಿಗೆ ಕರಡು ರೂಪಿಸುವ ಕಾರ್ಯ ಆರಂಭಿಸಿದ್ದು, ಈ ಮೂಲಕ ಕಡಿಮೆ ಮಕ್ಕಳನ್ನು ಪಡೆಯುವವರಿಗೆ ಪೋತ್ಸಾಹ ನೀಡುವುದು ಸರಕಾರದ ಕಾನೂನು ಆಯೋಗದ ಉದ್ದೇಶ.
ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಅತಿ ಹೆಚ್ಚು ಲೋಕಸಭಾ ಸದಸ್ಯರನ್ನು ಕಳಿಸುವ ರಾಜ್ಯ ಕೂಡ ಉತ್ತರ ಪ್ರದೇಶ. ಯುಪಿ ರಾಜ್ಯದಲ್ಲಿ 2022ರ ವೇಳೆಗೆ ಜನಸಂಖ್ಯೆ 23.76 ಕೋಟಿಗೇರುವ ಅಂದಾಜಿದೆ. ಆದರೇ, ಈಗ ಯುಪಿ ತನ್ನ ಜನಸಂಖ್ಯೆಯನ್ನು ನಿಯಂತ್ರಿಸಲು ಮುಂದಾಗಿದೆ.
ಕಡಿಮೆ ಮಕ್ಕಳನ್ನು ಹೊಂದುವುದನ್ನು ಪೋತ್ಸಾಹಿಸಲು ಕಾನೂನು ಜಾರಿಗೆ ತರಲು ಉತ್ತರ ಪ್ರದೇಶ ಕಾನೂನು ಆಯೋಗ ಕರಡು ರೂಪಿಸುತ್ತಿದೆ. ಇಬ್ಬರು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದವರಿಗೆ ಮಾತ್ರವೇ ಸರ್ಕಾರದ ಸೌಲಭ್ಯಗಳು ಲಭ್ಯವಾಗುವಂತೆ ಕಾನೂನು ರೂಪಿಸಲು ಕಾನೂನು ಆಯೋಗ ನಿರ್ಧರಿಸಿದೆ ಎಂದು ಉತ್ತರ ಪ್ರದೇಶ ಕಾನೂನು ಆಯೋಗದ ಅಧ್ಯಕ್ಷ ಆದಿತ್ಯನಾಥ ಮಿತ್ತಲ್ ಹೇಳಿದ್ದಾರೆ.
ಮುಂದಿನ 2 ತಿಂಗಳಲ್ಲಿ ಕಾನೂನು ಜಾರಿಗೆ ಅಗತ್ಯವಾದ ಮಸೂದೆಯ ಕರಡು ರೂಪಿಸುವುದಾಗಿ ಆದಿತ್ಯನಾಥ್ ಮಿತ್ತಲ್ ಹೇಳಿದ್ದಾರೆ.
ಇಬ್ಬರು ಮಕ್ಕಳನ್ನು ಹೊಂದುವುದಕ್ಕೆ ಮಾತ್ರ ಪೋತ್ಸಾಹ ನೀಡುವ ಬಗ್ಗೆ ಸಾರ್ವಜನಿಕರ ಸಲಹೆ, ಅಭಿಪ್ರಾಯ ಸಂಗ್ರಹ ಪಡೆಯಲಿದೆ. ಇಬ್ಬರು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದವರಿಗೆ ಮಾತ್ರವೇ, ಸರ್ಕಾರದ ಸೌಲಭ್ಯಗಳಾದ ಕೆಲ ಯೋಜನೆಗಳ ಸಬ್ಸಿಡಿ, ರೇಷನ್ ವಿತರಣೆ, ರಾಜ್ಯ ಸರ್ಕಾರದ ಉದ್ಯೋಗ, ರಾಜ್ಯ ಸರ್ಕಾರದ ಅಗ್ಗದ ಮನೆ ಸೌಲಭ್ಯಗಳು ಸಿಗುವಂತೆ ಮಾಡಲು ಕಾನೂನು ಜಾರಿಗೆ ಕರಡು ರೂಪಿಸುವ ಕಾರ್ಯವನ್ನು ಉತ್ತರ ಪ್ರದೇಶ ಕಾನೂನು ಆಯೋಗ ಆರಂಭಿಸಿದೆ.
ಇನ್ನೂ ಮುಂದೆಯಷ್ಟೇ ಕಾಯಿದೆ ಜಾರಿಗೊಳಿಸಿ, ದಿನಾಂಕ ನಿಗದಿಪಡಿಸಿ, ಅಂದಿನಿಂದ ಮುಂದೆ ಎರಡು ಮಕ್ಕಳನ್ನು ಪಡೆಯುವವರಿಗೆ ಮಾತ್ರ ರಾಜ್ಯ ಸರ್ಕಾರದಿಂದ ಸೌಲಭ್ಯಗಳನ್ನು ನೀಡುವ ಮೂಲಕ ಪೋತ್ಸಾಹ ನೀಡಲಾಗುತ್ತೆ. ಕಟ್ ಆಫ್ ದಿನಾಂಕ ನಿಗದಿಪಡಿಸುವಾಗ 9 ತಿಂಗಳ ಪ್ರಗ್ನೆನ್ಸಿ ಅವಧಿಯನ್ನು ಪರಿಗಣಿಸಲಾಗುತ್ತೆ ಎಂದು ಆದಿತ್ಯನಾಥ್ ಮಿತ್ತಲ್ ಹೇಳಿದ್ದಾರೆ.
ಹೊಸ ಕಾಯಿದೆಯು ಯಾರಿಗೂ ಶಿಕ್ಷೆಯಲ್ಲ. ಆದರೆ, ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಲು ತೀರ್ಮಾನಿಸುವವರು, ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗಲ್ಲ ಅಷ್ಟೇ ಎಂದು ಆದಿತ್ಯನಾಥ್ ಮಿತ್ತಲ್ ಹೇಳಿದ್ದಾರೆ.
(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)
ಉತ್ತರ ಪ್ರದೇಶ ಕಾನೂನು ಆಯೋಗವು ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಹಾಲಿ ಜಾರಿಯಲ್ಲಿರುವ ನೀತಿಗಳನ್ನು ಅಧ್ಯಯನ ನಡೆಸುತ್ತಿದೆ. ಜೊತೆಗೆ ಚೀನಾ, ಕೆನಡಾದ ಜನಸಂಖ್ಯಾ ನೀತಿಯ ಬಗ್ಗೆಯೂ ಅಧ್ಯಯನ ನಡೆಸಲಿದೆ. ನಾವು ಏನೇ ಮಾಡಿದರೂ, ಸಂವಿಧಾನದ ವ್ಯಾಪ್ತಿಯಲ್ಲಿ ಮಾಡಲಿದ್ದೇವೆ. ಶಿಕ್ಷಣವು ಪ್ರಜೆಗಳ ಮೂಲಭೂತ ಹಕ್ಕು. ಹೀಗಾಗಿ 2 ಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರ ಮಕ್ಕಳು, ಶಾಲೆಗೆ ದಾಖಲಾಗಲು ಯಾವುದೇ ನಿರ್ಬಂಧ ಇರಲ್ಲ ಎಂದಿದ್ದಾರೆ.
ಉತ್ತರ ಪ್ರದೇಶ ಕಾನೂನು ಆಯೋಗವು 2 ಮಕ್ಕಳ ನೀತಿಯ ಬಗ್ಗೆ ಕಾನೂನಿನ ಕರಡು ರೂಪಿಸಿ ರಾಜ್ಯ ಸರ್ಕಾರಕ್ಕೆ ಕಳಿಸಲಿದೆ. ಆದಾದ ಬಳಿಕ ರಾಜ್ಯ ಸರ್ಕಾರವು ಯಾವ ವರ್ಗವನ್ನು ಕಾಯ್ದೆ ವ್ಯಾಪ್ತಿಗೆ ಸೇರಿಸಬೇಕು, ಯಾವ ವರ್ಗದ ಜನರನ್ನು ಕಾಯ್ದೆ ವ್ಯಾಪ್ತಿಯಿಂದ ಕೈ ಬಿಡಬೇಕೆಂದು ತೀರ್ಮಾನ ಕೈಗೊಳ್ಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss