ಮಗುವಿನ ಜೆಂಡರ್ ರಿವೀಲ್ ಮಾಡಲು ಜಲಪಾತಕ್ಕೇ ಬಣ್ಣ ಹಾಕಿದ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದೇಶಗಳಲ್ಲಿ ಮಗು ಹುಟ್ಟುವ ಮುನ್ನ ಯಾವ ಮಗು ಆಗಮನವಾಗಲಿದೆ ಎನ್ನುವುದನ್ನು ತಿಳಿಯೋದಕ್ಕೆ ಕಾರ್ಯಕ್ರಮ ಮಾಡುವುದು ಮಾಮೂಲಿ.
ತಮ್ಮ ಇಷ್ಟದವರನ್ನು ಕರೆದು, ಗಂಡು ಅಥವಾ ಹೆಣ್ಣು ಮಗು ಎಂದು ಘೋಷಣೆ ಮಾಡ್ತಾರೆ, ಇದಕ್ಕಾಗಿ ವಾಡಿಕೆಯಂತೆ ನೀಲಿ ಎಂದರೆ ಗಂಡು ಮಗು, ಗುಲಾಬಿ ಎಂದರೆ ಹೆಣ್ಣು ಮಗು ಎನ್ನುವ ಬಣ್ಣವನ್ನು ವಿಭಿನ್ನವಾಗಿ ವಿವರಿಸುತ್ತಾರೆ.

ಬಾಕ್ಸ್‌ನಿಂದ ನೀಲಿ ಬಣ್ಣದ ಬಲೂನ್ ಹೊರಬರುವುದು, ಕೇಕ್‌ನೊಳಗೆ ಗುಲಾಬಿ ಬಣ್ಣ ಇರುವುದು ಹೀಗೆಲ್ಲಾ ರಿವೀಲ್ ಮಾಡ್ತಾರೆ, ಆದರೆ ಬ್ರೆಜಿಲ್‌ನ ಜೋಡಿಯೊಂದು ಜಲಪಾತದ ನೀರು ನೀಲಿ ಬಣ್ಣ ಆಗುವಂತೆ ಮಾಡಿದ್ದಾರೆ. ಇದು ಪರಿಸರವಾದಿಗಳಿಗೆ ಕಿರಿಕಿರಿಯುಂಟುಮಾಡಿದೆ.
ಬೇಕಾದಷ್ಟು ಐಡಿಯಾಗಳು ಇರುವಾಗ, ಜಲಪಾತಕ್ಕೆ ನೀಲಿ ಬಣ್ಣ ಬೆರೆಸಿ ಕಲುಷಿತ ಮಾಡಿದ್ಯಾಕೆ ಎನ್ನೋದು ಪರಿಸರವಾದಿಗಳ ಪ್ರಶ್ನೆ.

ಪರಿಸರ ಕಾರ್ಯಕರ್ತ ವೇನ್ ಕೋಸ್ಟಾ ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದ, ಜಲಪಾತದ ನೀರಿನ ಬಣ್ಣ ನೀಲಿ ಮಾಡಿದ್ದಾರೆ, ಅಷ್ಟೇ ಅಲ್ಲದೆ ಸುತ್ತಮುತ್ತ ನೀಲಿ ಬಣ್ಣದ ಬಾಂಬ್ ಹಾರಿಸಿ ಪರಿಸರ ಹಾಳುಮಾಡಿದ್ದಾರೆ.ಇದು ಸರಿಯಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!