spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

700 ವರ್ಷದ ಹಳೇ ಟೆಕ್ನಿಕ್‌ ಬಳಸಿ ಕನಸಿನ ಮನೆ ಕಟ್ಟಿದ ದಂಪತಿ, ಇದಕ್ಕೆ ಖರ್ಚಾಗಿದ್ದು 4 ಲಕ್ಷ ರೂ. ಮಾತ್ರ!

- Advertisement -Nitte

ಎಷ್ಟೋ ಮಂದಿಗೆ ಮನೆ ಕಟ್ಟೋದು ಜೀವಮಾನದ ಕನಸು, ನಮ್ಮದೊಂದು ಪುಟ್ಟ ಮನೆ ಇರಬೇಕು, ಬಾಡಿಗೆ ಗೋಜು ಇರಬಾರದು. ಎಷ್ಟು ಕಿಟಕಿ ಬೇಕೋ ಅಷ್ಟು, ಎಷ್ಟು ದೊಡ್ಡದಾದ ರೂಂ ಬೇಕೋ ಅಷ್ಟು ದೊಡ್ಡ ರೂಂ, ಬೆಡ್‌ರೂಂನಲ್ಲೂ ಬಾತ್‌ರೂಂ, ದೊಡ್ಡದಾದ ಸಿಂಕ್ ಹಾಗೆ ಪಾತ್ರೆ, ಡಬ್ಬಿ ಇಡೋದಕ್ಕೆ ದೊಡ್ಡ ಶೆಲ್ಫ್‌ಗಳು.

ಆದರೆ ಮನೆ ಕಟ್ಟೋದು ಅಂದ್ರೆ ಸುಲಭದ ಮಾತಾ? ಜೀವನವಿಡೀ ದುಡಿದು ಲೋನ್ ಮಾಡಿದ್ರೂ ಮನೆ ಖರ್ಚು ನಿಭಾಯಿಸೋಕೆ ಆಗೋದಿಲ್ಲ. ಆದರೆ ಪೂಣೆಯಲ್ಲಿ ಒಂದು ಜೋಡಿಯಿದೆ. ಇವರಿಗೆ ಐಶಾರಾಮಿ ಮನೆ ಬೇಡ್ವಂತೆ, ಕೇವಲ 4 ಲಕ್ಷ ರೂಪಾಯಿಯಲ್ಲಿ ತಾವೇ ಡ್ಯುಪ್ಲೆಕ್ಸ್ ಮನೆ ಕಟ್ಟಿದ್ದಾರಂತೆ!

ಇದು ನಿಜ. 700 ವರ್ಷದ ಹಳೆ ಟೆಕ್ನಿಕ್ ಬಳಸಿ ಈ ದಂಪತಿ ತಮ್ಮ ಕನಸಿನ ಮನೆಯನ್ನು ಕಟ್ಟಿದ್ದಾರೆ. ಈ ಮನೆ ಹೇಗೆ ಕಟ್ಟಿದ್ರು? ಮನೆ ಹೇಗಿದೆ? ರೌಂಡ್ಸ್ ಹಾಕೋಣ ಬನ್ನಿ..
ಮಹಾರಾಷ್ಟ್ರದ ವಾಘೇಶ್ವರ್‌ನಲ್ಲಿ ಯುಗ ಅಖ್ರೆ ಹಾಗೂ ಸಾಗರ್ ಶಿರುಂಡೆ ಮಣ್ಣು ಹಾಗೂ ಬಿದಿರನ್ನು ಬಳಸಿ ಮನೆ ಕಟ್ಟಿದ್ದಾರೆ. ಈ ರೀತಿ ಮನೆಗಳನ್ನು ಕಟ್ಟಿದ್ದರೆ ಬಾಳಿಕೆ ಬರೋಕೆ ಸಾಧ್ಯವಾ? ಒಂದೇ ಮಳೆಗೆ ಎಲ್ಲವೂ ಧರೆಗೆ ಬೀಳುತ್ತದೆ ಎಂದು ತಿಳಿದವರೆಲ್ಲ ಎಚ್ಚರಿಸಿದ್ದಾರೆ. ಆದರೆ ಯುಗ ಹಾಗೂ ಸಾಗರ್ ಹಿಂದಿನ ಕಾಲದಲ್ಲಿ ಎಷ್ಟೋ ಕೋಟೆಗಳನ್ನು ಬರೀ ಮಣ್ಣಿನಿಂದ ಕಟ್ಟಿದ್ದಾರೆ. ಈಗಲೂ ಆ ಕೋಟೆಗಳು ಬಾಳಿಕೆ ಬರುತ್ತಿವೆ ಎಂದು ಧೈರ್ಯ ಮಾಡಿ ಮನೆ ಕಟ್ಟಿದ್ದರು. ಮನೆ ಕಟ್ಟಿದ ವರ್ಷದೊಳಗೆ ಮಳೆ, ಸೈಕ್ಲೋನ್‌ನ ಹೊಡೆತ ಬಿದ್ದರೂ ಎರಡಂತಿಸ್ತಿನ ಇವರ ಮನೆಗೆ ಏನೂ ಆಗಿಲ್ಲ!

Cheap Mud House How to ಇಷ್ಟೊಂದು ಗಟ್ಟಿಮುಟ್ಟಾದ ಮನೆ ಕಟ್ಟೋಕೆ ಹೇಗೆ ಸಾಧ್ಯ?: ಸಾಗಾ ಅಸೋಸಿಯೇಟ್ಸ್‌ನಿಂದ ನಿರ್ಮಾಣವಾದ ಈ ಮಿಟ್ಟಿ ಮಹಲ್ ಯಾವುದೇ ಗಾಳಿ ಮಳೆಗೆ ಅಲ್ಲಾಡೋದಿಲ್ಲ, ಸಾಗಾ ಅಸೋಸಿಯೇಟ್ಸ್ ಕೂಡ ಇದೇ ಮೊದಲ ಬಾರಿಗೆ ಮಣ್ಣಿನ ಮನೆ ಕಟ್ಟಿದ್ದರೂ ಅವರು ಕಟ್ಟಿದ ಮನೆ ಬಗ್ಗೆ ತುಂಬಾನೇ ವಿಶ್ವಾಸ ಇದೆ. ಈ ಮನೆಯನ್ನು ನಾಲ್ಕು ಲಕ್ಷ ರೂಪಾಯಿಯಲ್ಲಿ ಕಟ್ಟಲಾಗಿದೆ.

ವರ್ಕ್‌ಶಾಪ್‌ : ಮೊದಲ ಮಣ್ಣನ್ನು ಸಿಮೆಂಟಿನ ಖಾಲಿ ಚೀಲಗಳಲ್ಲಿ ತುಂಬಿಸಿ, ನೀರು ಹಾಕಿ ಸಿಮೆಂಟ್ ಬ್ಲಾಕ್ ರೀತಿ ಗಟ್ಟಿಮಾಡಲಾಗಿದೆ. ಒಟ್ಟಾರೆ ಈ ಮನೆಗೆ ಮೂರು ಸಾವಿರಕ್ಕೂ ಹೆಚ್ಚು ಮಣ್ಣಿನ ಹೆಂಟೆಗಳು ಅವಶ್ಯವಿದ್ದು, ಮನೆಯ ಮೂರು ಗೋಡೆಗಳನ್ನು ಇದರಿಂದಲೇ ಕಟ್ಟಲಾಗಿದೆ. ಮೇಲಿರುವ ಸ್ಟೋರ್ ರೂಂಗಾಗಿ ಮಣ್ಣು ಹಾಗೂ ಬಿದಿರನ್ನು ಬಳಸಲಾಗಿದೆ.ಸಾಗರ್ ಈ ರೀತಿ ಮನೆ ಕಟ್ಟುವ ಟೆಕ್ನಿಕ್ ಬಗ್ಗೆ ಸ್ವಲ್ಪ ಮಾಹಿತಿ ಹೊಂದಿದ್ದರು. ವರ್ಕ್ ಶಾಪ್‌ಗೆ ತೆರಳಿ ಮನೆ ಕಟ್ಟುವ ವಿಧಾನ ತಿಳಿದುಕೊಂಡರು.

Cheap Mud House How to

ಹೊರಗೆ ಯಾವ ಲೇಯರ್‌ ಇದೆ ಗೊತ್ತಾ? : ಮನೆಯನ್ನು ಕಟ್ಟಿದ್ದೇನೋ ಆಯ್ತು. ಆದರೆ ಮನೆ ಹೊರಗಿನಿಂದಲೂ ಸುಂದರವಾಗಿ ಕಾಣುವುದು ಅವಶ್ಯವಾಗಿತ್ತು. ಹೊರಗಿನ ಲೇಯರ್‌ಗಾಗಿ ಸಾಗರ್ ಮಣ್ಣು, ಹೊಟ್ಟು, ಬೆಲ್ಲ, ಮೈರೊಬಾಲನ್ ಗಿಡದ ರಸ, ಬೇವು, ಗೋಮೂತ್ರ, ಸಗಣಿಯನ್ನು ಮಿಕ್ಸ್ ಮಾಡಿ ಸಾರಿಸಿದ್ದಾರೆ. ಗೋಡೆಗಳಿಗೆ ಇದರದ್ದೇ ಕೋಟಿಂಗ್ ಮಾಡಲಾಗಿದೆ.

Cheap Mud House How to

ಪ್ಲಾಸ್ಟಿಕ್‌ ಬಳಕೆ ಕಡಿಮೆ: ಮನೆಯ ಎಲ್ಲ ವಸ್ತುಗಳನ್ನು ಎಕೋ ಫ್ರೆಂಡ್ಲಿಯಾಗಿ ಬಳಸಲಾಗುತ್ತದೆ. ಇವರು ಅಂದುಕೊಂಡಿದ್ದಕ್ಕಿಂತ ಶೇ.70 ರಷ್ಟು ಖರ್ಚು ಕಡಿಮೆಯೇ ಆಗಿದೆ. ಮನೆಯ ಯಾವ ಭಾಗದಲ್ಲೂ ಸಿಮೆಂಟ್ ಬಳಕೆ ಮಾಡಿಯೇ ಇಲ್ಲ. ಆದಷ್ಟು ಪ್ಲಾಸ್ಟಿಕ್ ಬಳಕೆ ಕೂಡ ಕಡಿಮೆ ಮಾಡಿದ್ದಾರೆ. ಮನೆಯ ಸುತ್ತಮುತ್ತ ತರಕಾರಿ, ಹಣ್ಣುಗಳನ್ನು ಇವರು ಬೆಳೆಯುತ್ತಾರೆ. ಈಗಾಗಲೇ ಸುಮಾರು ಮಂದಿ ಮನೆಯನ್ನು ನೋಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ವಿದೇಶಿಗರೇ ಹೆಚ್ಚು, ನಿಸರ್ಗದ ಜೊತೆ ಬದುಕೋದು ಹೇಗೆ ಎನ್ನೋದನ್ನು ನಾವು ಅವರಿಗೆ ತಿಳಿಸಿಕೊಡಬೇಕಿದೆ ಎಂದು ಸಾಗರ್ ಹೇಳುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss