ಹೊಸದಿಗಂತ ಆನ್ ಲೈನ್ ಡೆಸ್ಕ್:
ತೊಕ್ಕೊಟ್ಟಿನ ವಸತಿ ಸಂಕೀರ್ಣವೊಂದರ ಸೆಕ್ಯುರಿಟಿ ಗಾರ್ಡ್ಗೆ ಕೇರಳದ ಬಾಗ್ಯಮಿತ್ರ ಒಲಿದಿದ್ದು, ಕೇರಳದಲ್ಲಿ ಪಡೆದುಕೊಂಡಿದ್ದ ಲಾಟರಿಯೊಂದಕ್ಕೆ ಒಂದು ಕೋಟಿ ಬಹುಮಾನ ಬಂದಿದೆ.
ತೊಕ್ಕೊಟ್ಟು ಜಂಕ್ಷಏನ್ನಲ್ಲಿರುವ ಸ್ಮಾರ್ಟ್ ಪ್ಲಾನೆಟ್ ವಸತಿ ಸಂಕೀರ್ಣದಲ್ಲಿ ಕಳೆದ ಮೂರು ವರ್ಷಗಳಿಂದ ಸೆಕ್ಯುರಿಟಿ ಕೆಲಸ ಮಾಡುತ್ತಿರುವ ಕೇರಳ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ(65)ಗೆ ಬಾಗ್ಯಮಿತ್ರ ಒಲಿದಿದ್ದು ಲಾಟರಿಯಲ್ಲಿ ಐದು ಮಂದಿ ಕೋಟಿ ವಿಜೇತರಲ್ಲಿ ಕುಟ್ಟಿ ಪಡೆದ ಲಾಟರಿಗೆ ಪ್ರಥಮ ಬಹುಮಾನ ಬಂದಿದೆ.
ಲಾಟರಿ ತೆಗೆಯುವ ಹವ್ಯಾಸವಿದ್ದ ಮೊಯ್ದಿನ್ ಕುಟ್ಟಿ ಕೇರಳದಲ್ಲಿ ಖರೀದಿಸಿದ ಏ .4ರಂದು ಡ್ರಾ ಆದ ಲಾಟರಿಯಲ್ಲಿ ಇವರು ಖರೀದಿಸಿದ ಬಿ.ಜೆ. 134048 ಸಂಖ್ಯೆಗೆ ಒಂದು ಕೋಟಿ ರೂ. ಪ್ರಥಮ ಬಹುಮಾನ ಬಂದಿದೆ.
ಸ್ಮಾರ್ಟ್ಸಿಟಿಯಲ್ಲಿ ಒಮೆಗಾ ಟೈಲರ್ ಅಂಗಡಿಯ ಮಾಲಕ ರವಿ ಅವರಿಂದ ಐನೂರು ರೂ. ಸಾಲ ಪಡೆದು ಕಾಸರಗೋಡಿಗೆ ತೆರಳಿ ಲಾಟರಿ ಖರೀದಿಸಿದ್ದರು. ಕಳೆದ ಹಲವು ದಶಕಗಳಿಂದ ಲಾಟರಿ ಖರೀದಿಸುವ ಗೀಳು ಇಟ್ಟುಕೊಂಡಿದ್ದ ಕುಟ್ಟಿಗೆ ಈ ಬಾರಿ ಭಾಗ್ಯಮಿತ್ರ ಅದೃಷ್ಟ ನೀಡಿದೆ.ವಿದೇಶದಲ್ಲಿ 14 ವರ್ಷ ಉದ್ಯೋಗದಲ್ಲಿದ್ದ ಮೊಯ್ದಿನ್ ಕುಟ್ಟಿ ಅವರಿಗೆ 1988ರ ಸುಮಾರಿಗೆ ದುಬೈಯ ಕೂಪನ್ ಒಂದಕ್ಕೆ ಒಂದು ಕೋಟಿ ದಿರಂ ಲಭಿಸಿತ್ತು. ಭಾರತದ ಕರೆನ್ಸಿಯ ಪ್ರಕಾರ 10 ಕೋಟಿ ರೂ. ಈ ಗೆದ್ದ ಲಾಟರಿಯ ಹಣದಲ್ಲಿ ಕ್ಯಾಲಿಕಟ್ನಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟಿ ಮಗಳಿಗೆ ಮದುವೆ ಮಾಡಿದ್ದರು. ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸಿ ಖಾಲಿ ಮಾಡಿದ್ದರು.
ಕಳೆದ ಮೂರು ವರ್ಷದಿಂದ ಸೆಕ್ಯುರಿಟಯಾಗಿ ದುಡಿಯುತ್ತಿರುವ ಕುಟ್ಟಿಗೆ ಇದೀಗ ಎರಡನೇ ಬಾರಿಗೆ ಅದೃಷ್ಟ ಒಲಿದಿದಿದೆ.