Monday, October 2, 2023

Latest Posts

ದೆಹಲಿಯಲ್ಲಿ ಬಾಲಕಿ ಮರ್ಡರ್ | ಕೊಲೆ ಮಾಡಿದ್ದಕ್ಕೆ ಬೇಜಾರೇ ಇಲ್ಲ ಎಂದ ಪಾತಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯೇ ಬೆಚ್ಚಿಬೀಳುವಂಥ ಮರ್ಡರ್ ಮಾಡಿದ್ದ ಆರೋಪಿ ಸಾಹಿಲ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಭಾನುವಾರ ದೆಹಲಿಯ ರಸ್ತೆಯೊಂದರಲ್ಲಿ 16 ವರ್ಷದ ಬಾಲಕಿಯ ಹೊಟ್ಟೆಗೆ 22 ಬಾರಿ ಇರಿದು, ಕಾಲಿನಿಂದ ತುಳಿದು, ಕಲ್ಲು ಎತ್ತಿ ಹಾಕಿ ಕ್ರೂರವಾಗಿ ಕೊಲೆ ಮಾಡಿದ್ದ ಪಾತಕಿ ಇದೀಗ ಕೊಲೆ ಮಾಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದಿದ್ದಾನೆ.

ಎಸಿ ರಿಪೇರಿ ಮಾಡುವ ಸಾಹಿಲ್ 16 ವರ್ಷದ ಬಾಲಕಿಯೊಂದಿಗೆ ಪ್ರೀತಿಯಲ್ಲಿದ್ದ. ಅವಳು ಏಳನೇ ಕ್ಲಾಸ್‌ನಲ್ಲಿದ್ದಾಗಿನಿಂದ ಪ್ರೀತಿಯಲ್ಲಿದ್ದೆವು, ಇತ್ತೀಚೆಗೆ ಅವಳು ಹಳೇ ಬಾಯ್‌ಫ್ರೆಂಡ್ ಜೊತೆ ಓಡಾಟ ನಡೆಸಿದ್ದಳು. ನನ್ನ ಜೊತೆ ಬ್ರೇಕ್‌ಅಪ್ ಮಾಡಿಕೊಂಡಿದ್ದಳು. ನನ್ನ ಕಾಲ್ ಮೆಸೇಜ್ ಯಾವುದಕ್ಕೂ ಉತ್ತರ ಕೊಡುತ್ತಿರಲಿಲ್ಲ. ಅವಳು ಈ ಸಾವಿಗೆ ಅರ್ಹಳು ಎಂದು ಸಾಹಿಲ್ ಹೇಳಿದ್ದಾರೆ.

ಬರ್ಥ್‌ಡೇ ಪಾರ್ಟಿಗೆ ಆಕೆ ತೆರಳುವ ವಿಷಯ ತಿಳಿದು ಸಾಹಿಲ್ ಅಟ್ಯಾಕ್ ಮಾಡಿದ್ದು, ಗೋಡೆಗೆ ಒತ್ತಿ ಆಕೆಗೆ ಇರಿದಿದ್ದಾನೆ, ಕುಸಿದ ಆಕೆಯನ್ನು ತುಳಿದು ನಾಲ್ಕಾರು ಬಾರಿ ಕಲ್ಲು ಎತ್ತಿ ಹಾಕಿದ್ದಾನೆ. ಸಾಕಷ್ಟು ಮಂದಿ ರಸ್ತೆಯಲ್ಲಿ ಇದನ್ನು ನೋಡುತ್ತಿದ್ದರೂ ಸಾಹಿಲ್ ಕೊಲೆ ಮಾಡಿದ್ದಾನೆ.

ಪೊಲೀಸರಿಗೆ ಮಾಹಿತಿ ದೊರೆತಾಗ ಯುವತಿ ಮೈಮೇಲೆ 34 ಗಾಯಗಳಾಗಿದ್ದು, ತಲೆಬುರುಡೆ ಛಿದ್ರವಾಗಿತ್ತು. ಈ ಹಿಂದೆ ಯುವತಿ ಸಾಹಿಲ್‌ಗೆ ಬ್ರೇಕ್‌ಅಪ್ ಮಾಡಿಕೊಳ್ಳದಿದ್ದರೆ ಪೊಲೀಸರಿಗೆ ತಿಳಿಸುವುದಾಗಿ ಬೆದರಿಸಿದ್ದಳು, ಪಿಸ್ತೂಲ್ ಕೂಡ ತೋರಿಸಿ ಭಯಪಡಿಸಲು ಯತ್ನಿಸಿದ್ದಳು. ಕೊಲೆಯ ಹಿಂದಿನ ದಿನ ಜಗಳವಾಗಿದ್ದು, ಸಾಹಿಲ್ ಸಿಟ್ಟಿನಲ್ಲಿ ಯುವತಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!