ಪ್ರಧಾನಿ ಮೋದಿ ಬಳಿ ವಿಶೇಷ ಮನವಿ ಮಾಡಿ ಕಣ್ಣೀರಿಟ್ಟ ಮೃತ ಐಎಎಸ್ ಅಧಿಕಾರಿ ಜಿ.ಕೃಷ್ಣಯ್ಯ ಪುತ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಬಿಹಾರದಲ್ಲಿ 29 ವರ್ಷಗಳ ಹಿಂದೆ ಹತ್ಯೆಗೀಡಾದ ಐಎಎಸ್ ಅಧಿಕಾರಿ ಜಿ.ಕೃಷ್ಣಯ್ಯ (G Krishnaiah) ಅವರ ಪುತ್ರಿ ಪದ್ಮಾ ಕೃಷ್ಣಯ್ಯ (Padma Krishnaiah) ಪ್ರಕರಣದಲ್ಲಿ ಅಪರಾಧಿಯಾ ಆನಂದ್ ಮೋಹನ್ ಸಿಂಗ್ ನ್ನು ಬಿಡುಗಡೆ ಮಾಡಿದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮನವಿ ಮಾಡಿದ್ದಾರೆ.

ಬಿಹಾರದ ಜೈಲು ನಿಯಮಗಳಲ್ಲಿ ತಿದ್ದುಪಡಿ ಮಾಡಿದ ನಂತರ ಗ್ಯಾಂಗ್ ಸ್ಟರ್, ರಾಜಕಾರಣಿಯಾಗಿರುವ ಆನಂದ್ ಮೋಹನ್ ಸಿಂಗ್ ನ್ನು ಇಂದು(ಗುರುವಾರ) ಮುಂಜಾನೆ 3 ಗಂಟೆಗೆ ಬಿಡುಗಡೆ ಮಾಡಲಾಗಿದೆ.
ಇದರ ಬೆನ್ನಲ್ಲೇ ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ ಪ್ರಧಾನಿ ಮೋದಿ ಅವರಿಗೆ ಮನವಿಯೊಂದು ಮಾಡಿದ ಜಿ.ಕೃಷ್ಣಯ್ಯ ಅವರ ಪುತ್ರಿ ಪದ್ಮಾ, ಅಂತಹ ಜನರು ಸಮಾಜಕ್ಕೆ ಮರಳಿ ಬರಬಾರದು ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಇದರ ವಿರುದ್ಧ ಹೋರಾಡುವ ಶಕ್ತಿ ನನಗಿಲ್ಲ.ದಯವಿಟ್ಟು ಅಂತಹ ಗ್ಯಾಂಗ್​​ಸ್ಟರ್ ಮತ್ತು ಮಾಫಿಯಾಗಳು ಬಿಹಾರ ಅಥವಾ ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ತಿರುಗಾಡದಂತೆ ಕಾನೂನನ್ನು ತನ್ನಿ. ದಯವಿಟ್ಟು ಪರಿಸ್ಥಿತಿಯನ್ನು ಮರುಪರಿಶೀಲಿಸಿ ಎಂದು ಹೇಳಿದ್ದಾರೆ.

ನಮ್ಮ ತಂದೆಯ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ದಯವಿಟ್ಟು ಬಿಹಾರದ ಜನರನ್ನು ಕೇಳಿ. ಇಂದು,29 ವರ್ಷಗಳ ನಂತರ, ಜನರು ಇದಕ್ಕಾಗಿ ಹೋರಾಡಲು ಸಿದ್ಧರಾಗಿದ್ದಾರೆ, ಇದು ನಮಗೆ ಪ್ರತಿಫಲ ಎಂಬ ಕಾರಣದಿಂದಲ್ಲ ಎಂದು ಹೇಳುತ್ತಾ ಪದ್ಮ ಕಣ್ಣೀರಿಟ್ಟಿದ್ದಾರೆ .

ಘಟನೆ ಏನು?
1994 ರಲ್ಲಿ, ಆನಂದ್ ಮೋಹನ್ ಅವರ ಬಿಪಿಪಿ ಪಕ್ಷದ ಮುಜಾಫರ್‌ಪುರದ ದರೋಡೆಕೋರ-ರಾಜಕಾರಣಿ ಛೋಟಾನ್ ಶುಕ್ಲಾ ಅವರ ಮೃತದೇಹ ಹೊತ್ತು ಗುಂಪೊಂದು ಪ್ರತಿಭಟನೆ ನಡೆಸುತ್ತಿತ್ತು. ಡಿಸೆಂಬರ್ 4 ರಂದು ಮುಜಾಫರ್‌ಪುರದ ಭಗವಾನ್‌ಪುರ್ ಚೌಕ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ವಾಹನದ ಮೇಲೆ ಗುಂಡು ಹಾರಿಸಿ ಶುಕ್ಲಾ ಸಾವಿಗೀಡಾಗಿದ್ದರು. ಛೋಟಾನ್ ಹತ್ಯೆಯಲ್ಲಿ ಪೊಲೀಸರೊಬ್ಬರು ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಆತನ ಬೆಂಬಲಿಗರು ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿ ವಾಹನಗಳನ್ನು ಧ್ವಂಸಗೊಳಿಸಿದ್ದರು. ಮರುದಿನ ಆನಂದ್ ಮೋಹನ್ ತಂದೆಯ ಗ್ರಾಮವಾದ ಖಂಜಾಹಚಕ್‌ಗೆ ಮೃತದೇಹ ಹೊತ್ತು ಬೆಂಬಲಿಗರು ಹೋಗಿದ್ದರು.
ಆನಂದ್ ಮೋಹನ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೆರೆದಿದ್ದ ಜನರನ್ನುದ್ದೇಶಿಸಿ ಆವೇಶಭರಿತ ಭಾಷಣ ಮಾಡಿದರು. ಆ ಸಮಯದಲ್ಲಿ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ ಕೃಷ್ಣಯ್ಯ ಅವರು ಹಾಜಿಪುರದಿಂದ ಗೋಪಾಲಗಂಜ್‌ಗೆ ಹಿಂತಿರುಗುತ್ತಿದ್ದರು. ಕೆಂಪು ದೀಪವಿರುವ ಸರ್ಕಾರಿ ವಾಹನದ ನೋಡಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಖಬ್ರಾ ಗ್ರಾಮದ ಬಳಿ ಕೃಷ್ಣಯ್ಯ ಅವರನ್ನು ಘೇರಾವ್ ಮಾಡಿ ಕಾರಿಗೆ ಕಲ್ಲು ತೂರಾಟ ಆರಂಭಿಸಿದರು. ಈ ನಡುವೆ ಛೋಟಾನ್ ಸಹೋದರ ಭುತ್ಕುನ್ ಶುಕ್ಲಾ ಕೃಷ್ಣಯ್ಯ ಅವರ ಮೇಲೆ ಗುಂಡು ಹಾರಿಸಿದ್ದು, ಜನರ ಗುಂಪು ಕೃಷ್ಣಯ್ಯ ಅವರನ್ನು ಥಳಿಸಿ ಹತ್ಯೆಗೈದಿದೆ.

ಕೃಷ್ಣಯ್ಯ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಐಎಎಸ್ ಅಧಿಕಾರಿಯನ್ನು ಹತ್ಯೆ ಮಾಡಲು ಆನಂದ್ ಮೋಹನ್ ಜನಸಮೂಹವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ. 2007 ರಲ್ಲಿ ಆನಂದ್ ಮೋಹನ್ಗೆ ಮರಣದಂಡನೆ ವಿಧಿಸಲಾಯಿತು. ಆದರೆ ನಂತರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು. ಇದಾದ ನಂತರ ಅವರು 15 ವರ್ಷಗಳ ಕಾಲ ಜೈಲಿನಲ್ಲಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!