ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆ: ಇದು ಕೊಲೆ ಎಂದ ಕುಟುಂಬಸ್ಥರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಪೂರ್ಣಪ್ರಜ್ಞಾ ಬಡಾವಣೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಪತಿಯೇ ಕೊಲೆಗೈದು ನೇಣು ಹಾಕಿದ್ದಾನೆ ಎಂದು ಪತ್ನಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ರಶ್ಮಿ (32) ಮೃತ ಮಹಿಳೆ. ಮಂಡ್ಯ (Mandya) ಮೂಲದ ರಶ್ಮಿ 10 ವರ್ಷಗಳ ಹಿಂದೆ ಶ್ರೀರಂಗಪಟ್ಟಣ ಮೂಲದ ಅರವಿಂದ್ ಎಂಬಾತನೊಂದಿಗೆ ವಿವಾಹವಾಗಿದ್ದರು. ದಂಪತಿಗೆ 5 ವರ್ಷದ ಗಂಡು ಮಗು ಇದೆ.

ಅರವಿಂದ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ (Engineer) ಆಗಿ, ರಶ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಇತ್ತ ಪತಿಯ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದು, ಪತ್ನಿಯ ಕುಟುಂಬಸ್ಥರು ಕೊಲೆ ಆರೋಪ ಹೊರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!