ದಿಗಂತ ವರದಿ ಕಲಬುರಗಿ:
ಪ್ರೀತಿ ಮಾಡಿದ ಹುಡುಗನ ಸಾವಿನಿಂದ ಮನನೊಂದು ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಲಿ ನಡೆದಿದೆ.
ಕಲಬುರಗಿ ನಗರದ ಪಿಡಬ್ಲೂಡಿ ಕ್ವಾಟಸ್೯ನಲ್ಲಿ ವಾಸವಿರುವ ಶೃತಿ (18) ಎಂಬ ಯುವತಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುದೈ೯ವಿಯಾಗಿದ್ದಾಳೆ.ದ್ವಿತೀಯ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದ ಶೃತಿ.ನಿನ್ನೆ ಸಂಜೆ ಹೊತ್ತಿಗೆ ತಮ್ಮ ಮನೆಯ ಬಾಗಿಲಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಂಬಂಧಿಕರ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಆದರೆ ಯುವಕ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದ,ಈ ಘಟನೆಯಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಶನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.