ಕೈಕೊಟ್ಟಿದ್ದ ಮುಂಗಾರು ಮತ್ತೆ ವಾಪಸ್: ಬೆಳಗಾವಿಯಲ್ಲಿ ಮಳೆ ಸಂಭ್ರಮ, ರೈತರಿಗೆ ನೆಮ್ಮದಿ

ಹೊಸದಿಗಂತ ವರದಿ ಬೆಳಗಾವಿ: ಜೂನ್ ತಿಂಗಳು ಮುಕ್ತಾಯದ ಹಂತಕ್ಕೆ ಬಂದರೂ ಕೃಪೆ ತೋರದೆ ಕೈಕೊಟ್ಟಿದ್ದ ಮುಂಗಾರು ಮಳೆ, ಕೊನೆಗೂ ಭಾನುವಾರ ಮಧ್ಯಾಹ್ನದಿಂದ ಜಿಲ್ಲೆಯಾದ್ಯಂತ ಭರ್ಜರಿಯಾಗಿ ಮರುಪ್ರವೇಶ ಮಾಡಿದೆ. ವರುಣದೇವನ ಈ ಹಠಾತ್ ಕೃಪೆಯಿಂದಾಗಿ ಕಂಗಾಲಾಗಿದ್ದ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿದ್ದು, ಪ್ರಾಣಿ-ಪಕ್ಷಿ ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಹಾಹಾಕಾರ ಸೃಷ್ಟಿಸಿದ್ದ ಮಳೆ ಅಭಾವ: ಪ್ರಸಕ್ತ ವರ್ಷ ಮುಂಗಾರು ಅವಧಿಯ ಆರಂಭದಲ್ಲೇ ಮಳೆ ಸಂಪೂರ್ಣ ಕೈಕೊಟ್ಟಿತ್ತು. ಇದರಿಂದಾಗಿ ಜೂನ್ ತಿಂಗಳ ಕೊನೆಯ ವಾರ ಬಂದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ … Continue reading ಕೈಕೊಟ್ಟಿದ್ದ ಮುಂಗಾರು ಮತ್ತೆ ವಾಪಸ್: ಬೆಳಗಾವಿಯಲ್ಲಿ ಮಳೆ ಸಂಭ್ರಮ, ರೈತರಿಗೆ ನೆಮ್ಮದಿ