Saturday, August 13, 2022

Latest Posts

ಆಷಾಢ ಆರಂಭವಾದರೂ ಭಕ್ತರಿಗೆ ಸಿಗಲಿಲ್ಲ ಚಾಮುಂಡೇಶ್ವರಿ ದರ್ಶನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮೈಸೂರು :

ಆಷಾಢ ಮಾಸದ ಅಮಾವಾಸೆಯ ಶುಕ್ರವಾರ ಆರಂಭವಾದರೂ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಮಾತ್ರ ಭಕ್ತರಿಗೆ ಸಿಗಲಿಲ್ಲ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಷಾಢ ಮಾಸದ ಅಮಾವಾಸೆ ಹಾಗೂ ಶುಕ್ರವಾರಗಳಂದು ದೇಶದ ನಾನಾ ರಾಜ್ಯಗಳಿಂದ, ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ದರ್ಶನಕ್ಕೆ ಬರುತ್ತಾರೆ.
ಆದರೆ ಈ ವೇಳೆ ಕೊರೋನಾ ಸೋಂಕು ಹರಡುವಿಕೆ ಸಾಧ್ಯತೆಯಿರುವ ಕಾರಣ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಮೈಸೂರಿನಲ್ಲಿ ಕೊರೋನಾ ಸೋಂಕು ಹರಡುವಿಕೆಯ ಪ್ರಕರಣಗಳು ಇನ್ನೂ ಕೂಡ ನಿಯಂತ್ರಣಕ್ಕೆ ಬಂದಿಲ್ಲ. ಇದರ ನಡುವೆ ಚಾಮುಂಡಿಬೆಟ್ಟಕ್ಕೆ ಪ್ರವೇಶಿಸಲು ಜನರಿಗೆ ಅವಕಾಶ ಕೊಟ್ಟರೆ, ಸೋಂಕು ಹೆಚ್ಚು ಹರಡುವ ಸಾಧ್ಯತೆ ಇದೆ. ಹೀಗಾಗಿ, ಜು.9 ಆಷಾಡ ಅಮಾವಾಸ್ಯೆ, ಜು.16 ಮೊದಲನೇ ಆಷಾಡ ಶುಕ್ರವಾರ, ಜು.23ರಂದು 2ನೇ ಆಷಾಡ ಶುಕ್ರವಾರ, ಜು.30 ಮೂರನೇ ಆಷಾಡ ಶುಕ್ರವಾರ, ಅಮ್ಮನವರ ವರ್ಧಂತಿ, ಆ.6 ನಾಲ್ಕನೇ ಆಷಾಡ ಶುಕ್ರವಾರ, ಆ.8 ಭೀಮನ ಆಮಾವಾಸ್ಯೆ ದಿನ ನಿರ್ಬಂಧ ಹಾಕಲಾಗಿದೆ.
ಬೆಟ್ಟಕ್ಕೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಶನಿವಾರ, ಭಾನುವಾರ ವಾರಾಂತ್ಯವಾಗಿರುವುದರಿAದ ಸೋಮವಾರದವರೆಗೆ ನಿರ್ಬಂಧ ಮುಂದುವರಿಸಲಾಗಿದೆ.
ಹೀಗಾಗಿ ಚಾಮುಂಡಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗದ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಲಾಗಿದ್ದು, ಬೆಟ್ಟಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಅಲ್ಲದೇ ಬೆಟ್ಟದ ಕೆಳಭಾಗದಿಂದ ಬೆಟ್ಟದ ಮೇಲ್ಬಾಗದ ತನಕ ಇರುವ ಮೆಟ್ಟಿಲುಗಳ ದ್ವಾರಗಳನ್ನು ಬಂದ್ ಮಾಡಿ, ಪೊಲೀಸರ ಕಾವಲು ಹಾಕಲಾಗಿದೆ. ಹೀಗಾಗಿ ಚಾಮುಂಡೇಶ್ವರಿಯ ದರ್ಶನ ಕೊರೋನಾ ಕಾರಣದಿಂದ ಸಿಗದೆ ಭಕ್ತರು ಬೇಸರಗೊಂಡರು. ದೂರದಿಂದಲೇ ನಿಂತು ಚಾಮುಂಡೇಶ್ವರಿಗೆ ಕೈಮುಗಿದು, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಹರಕೆಗಳನ್ನು ಕಟ್ಟಿಕೊಂಡರು. ಆದರೆ ಆಷಾಢ ಶುಕ್ರವಾರದಂದೇ ಹರಕೆ ತೀರಿಸುವುದಾಗಿ ಹರಕೆ ಹೊತ್ತಿದ್ದವರು, ಅದನ್ನು ತೀರಿಸಲಾಗದೆ ಪರದಾಡಿದರು.
ಸರಳವಾಗಿ ನಡೆದ ಉತ್ಸವ
ಅಮವಾಸ್ಯೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ನಿರ್ಬಂಧ ಹೇರಿರುವುದರಿಂದ, ಚಾಮುಂಡೇಶ್ವರಿಯ ಉತ್ಸವವು ಅತ್ಯಂತ ಸರಳವಾಗಿ ನಡೆಯಿತು.
ಆಷಾಢ ಅಮವಾಸ್ಯೆಯಂದು ಚಾಮುಂಡೇಶ್ವರಿ ದೇವಸ್ಥಾನದ ಹೊರಭಾಗದ ಸುತ್ತ ಚಾಮುಂಡೇಶ್ವರಿ ವಿಗ್ರಹವನ್ನ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷವೂ ಕೊರೊನಾ ಆರ್ಭಟವು ಮುಂದುವರೆದಿರುವುದರಿAದ ದೇವಸ್ಥಾನ ಒಳಗೆ ದೇವಸ್ಥಾನ ಅರ್ಚಕರು ಹಾಗೂ ಸಿಬ್ಬಂದಿಯಿAದ ಉತ್ಸವವನ್ನು ನೆರವೇರಿಸಲಾಯಿತು. ಧಾರ್ಮಿಕ ಕಾರ್ಯಗಳು ಸರಳ ಹಾಗೂ ಸಾಂಪ್ರದಾಯಕವಾಗಿ ನೆರವೇರಿದವು. ಚಾಮುಂಡೇಶ್ವರಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪ್ರಸಾದ ವಿತರಣೆ, ದಾಸೋಹವನ್ನು ರದ್ದುಪಡಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss