ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಕಾರಣ ನೀಡಿದ ದೆಹಲಿ ಏಮ್ಸ್​​ ನಿರ್ದೇಶಕ

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದು, ಇದಕ್ಕೆ ಪ್ರಮುಖ ಎರಡು ಕಾರಣಗಳನ್ನು ದೆಹಲಿಯ ಏಮ್ಸ್​ ವೈದ್ಯರು ಕಂಡುಕೊಂಡಿದ್ದಾರೆ.
ಏಮ್ಸ್​ ನ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಹೇಳುವ ಪ್ರಕಾರ, ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಕಡಿಮೆಯಾಗಿದೆಯಂದು ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಹಾಗೂ ರೂಪಾಂತರಗೊಂಡಿರುವ ವೈರಸ್​​ನ ಆರ್ಭಟದಿಂದ ಇವತ್ತು ವ್ಯಾಪಕ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಡಿಸೆಂಬರ್​ನಿಂದ ಏಪ್ರಿಲ್​ವರೆಗೆ ಹಬ್ಬ, ಜಾತ್ರೆ, ಉತ್ಸವಗಳು ಹೆಚ್ಚು ನಡೆಯುತ್ತವೆ. ಅಲ್ಲದೇ ಪಂಚರಾಜ್ಯ ಚುನಾವಣೆಯೂ ಈಗಲೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದಕ್ಕೆ ಸೋಂಕು ವ್ಯಾಪಿಸಿದೆ. ಇದರ ಬಗ್ಗೆ ಮೊದಲೇ ಎಚ್ಚರವಹಿಸಿದ್ದರೇ ಇಂದು ಇಷ್ಟು ಪ್ರಮಾಣದಲ್ಲಿ ಸೋಂಕು ಹರಡುತ್ತಿರಲಿಲ್ಲ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss