ಮಸೀದಿ ಕೆಡವಿದಾಗ ದೇಗುಲ ಪತ್ತೆ ಪ್ರಕರಣ- ದಾಖಲೆ ಪರಿಶೀಲಿಸಿ ಮುಂದಿನ ಕ್ರಮ: ಶಾಸಕ ಡಾ. ಭರತ್ ಶೆಟ್ಟಿ

ಹೊಸದಿಗಂತ ವರದಿ, ಮಂಗಳೂರು
ತಾಲೂಕಿನ ಗಂಜಿಮಠ ಮಳಲಿಯ ಮಸೀದಿ ಪುನರ್ ನವೀಕರಣ ಸಂದರ್ಭ ಪತ್ತೆಯಾದ ದೇವಸ್ಥಾನ ಮಾದರಿಯ ಕಟ್ಟಡದ ಸಮಗ್ರ ತನಿಖೆಗೆ ಸೂಚಿಸಿ ,ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಸ್ಥಳದ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದ್ದಾರೆ.
ಪ್ರಸ್ತುತ ಮಸೀದಿ ಇರುವ ಸ್ಥಳ ಸರಕಾರಿ ಜಾಗವಾಗಿದ್ದು, 2001ರಲ್ಲಿ ಮಸೀದಿ ಕಟ್ಟಲು ಮಂಜೂರಾಗಿತ್ತು. ಅನಂತರ ವಕ್ಫ್ ಬೋರ್ಡ್‌ನಲ್ಲಿ ನೋಂದಣಿ ಮಾಡಿ ಮಸೀದಿ ನಿರ್ಮಿಸಲಾಗಿದೆ. ಸದ್ಯ ದೇಗುಲದ ಕುರುಹುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ.
ಪುರಾತನ ಕಟ್ಟಡವೋ,ಅಥವಾ ಈ ಹಿಂದೆ ಯಾರದ್ದಾದರೂ ಸುಪರ್ದಿಯಲ್ಲಿತ್ತೆ ಎಂಬುದರ ಬಗ್ಗೆ ದಾಖಲೆ ಪರಿಶೀಲನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!