Friday, July 1, 2022

Latest Posts

ಬಾಗಿಲು ಮುರಿದು ಚಿನ್ನದ ಆಭರಣ ದೋಚಿದ ಕಳ್ಳರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಅಂಕೋಲಾ:

ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬಂಗಾರದ ಆಭರಣ ಕಳ್ಳತನ ಮಾಡಿದ ಘಟನೆ ಅಂಕೋಲಾ ತಾಲೂಕಿನ ತೆಂಕಣಕೇರಿಯಲ್ಲಿ ನಡೆದಿದೆ. ಮನೆಯ ಮಾಲೀಕ ಸುಭಾಷ್ ನಾರಾಯಣ ನಾಯ್ಕ ಮತ್ತು ಆತನ ಕುಟುಂಬ ಕಾರವಾರದ ಚೆಂಡಿಯಾದಲ್ಲಿ ಸಂಬಂದಿ ಯೊಬ್ಬರು ಸಾವನ್ನಪ್ಪಿದ್ದು ಅವರಮನೆಗೆ ಮಂಗಳವಾರ ಸಂಜೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದದ್ದನ್ನು ಗಮನಿಸಿದ ಕಳ್ಳರು ಮುಂದಿನ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ ಅದು ಮುರಿಯದೆ ಇದ್ದಾಗ ಹಿಂಬದಿ ಬಾಗಿಲನ್ನು ಮುರಿದು ಮನೆಯಲ್ಲಿದ್ದ 43 ಗ್ರಾಂ ಗಣಪತಿ ದೇವರ ಬಂಗಾರದ ಆಭರಣವನ್ನು ಕದ್ದು ಬೆಳ್ಳಿ ಆಭರಣಗಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ ಮಾಲೀಕರು ಗುರುವಾರ ಬೆಳಿಗ್ಗೆ ಮನೆಗೆ ಬಂದು ನೋಡಿದರೆ ಬಾಗಿಲು ತೆರದರಿತಿಯಲ್ಲಿ ಇದ್ದದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬೆರಳಚ್ಚು ತಂತ್ರಜ್ಞರು ಭೇಟಿನೀಡಿದ್ದಾರೆ ಪಿಎಸೈ ಈ ಸಿ ಸಂಪತ್ ಪ್ರಕರಣ ದಾಖಲಿಸಿಕೊಂಡು ಪ್ರತ್ಯೇಕ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss