ತೈವಾನ್ ಪಕ್ಕದಲ್ಲೇ ಗುಟುರು ಹಾಕುತ್ತಿದೆ ಡ್ರ್ಯಾಗನ್: ಅವಧಿ ಮುಗಿದರೂ ನಿಂತಿಲ್ಲ ‘ಸಮರಾಭ್ಯಾಸ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ವಿರೋಧಗಳ ನಡುವೆಯೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ತೈವಾನ್ ಪರಿಸರದಲ್ಲಿ ತನ್ನ ಸಮುದ್ರ ಮತ್ತು ವಾಯು ಸಮರಾಭ್ಯಾಸ ಮುಂದುವರಿಸಿದೆ.

ಭಾನುವಾರ‌ ಸಮರಾಭ್ಯಾಸ ಕೊನೆಗೊಳಿಸುತ್ತೇವೆ ಎಂದಿದ್ದ ಚೀನಾ ಭಾನುವಾರದ ಬಳಿಕವೂ ಸಮರಾಭ್ಯಾಸ ವಿಸ್ತರಿಸಿರುವುದು ಜಾಗತಿಕ‌ಮಟ್ಟದಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಅಮೆರಿಕದ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯ ಬಳಿಕ ಬಹಳಷ್ಟು ಬೆಳವಣಿಗಳು ನಡೆಯುತ್ತಿದ್ದು, ಮಿಲಿಟರಿ ಸಮರಾಭ್ಯಾಸಗಳು ಹೊಸ ಆತಂಕ ಹುಟ್ಟುಹಾಕಿವೆ. ಈ ನಡುವೆ ಚೀನಾದ ಮಿಲಿಟರಿ, ತೈವಾನ್‌ಗೆ ನೌಕಾ ಮತ್ತು ವಾಯು ದಿಗ್ಬಂಧನ ಹಾಕುತ್ತಿದ್ದು, ಮುಂದುವರಿದ ಭಾಗವಾಗಿ ತೈವಾನ್ ಮೇಲೆ ಬೀಚ್ ದಾಳಿ ಮಾಡಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ ಒಂದೇ ದಿನ ಚೀನಾದ ಬರೋಬ್ಬರಿ 66 ವಿಮಾನಗಳು ಹಾರಾಟ‌ ನಡೆಸಿದ್ದು, ಈ ಪೈಕಿ 22 ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!