ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ನೆಲೆಸೋದು ಅದೆಷ್ಟೋ ಜನರ ಕನಸಾಗಿತ್ತು. ಅದಕ್ಕಾಗಿಯೇ ಅದೇಷ್ಟೋ ಜನರು ಅಮೇರಿಕಾದ ಗ್ರೀನ್ ಕಾರ್ಡ್‌ಗೆ ಅಪ್ಲೈ ಮಾಡಿ, ವರ್ಷಾನುಗಟ್ಟಲೇ ಕಾಯುತ್ತಾರೆ. ಅಂಥವ್ರಿಗೊಂದು ದುಃಖದ ಸಂಗತಿ ಟ್ರಂಪ್ ಸರ್ಕಾರದಿಂದ ಬಂದಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಪೌರತ್ವಕ್ಕಾಗಿ ಗೋಲ್ಡ್ ಕಾರ್ಡ್ ಯೋಜನೆಯನ್ನ ಘೋಷಿಸಿದ್ದಾರೆ. ಈ ಯೋಜನೆಯಿಂದ ಅಮೆರಿಕಾದ ಪೌರತ್ವದ ಕನಸು ಕಾಣುತ್ತಿದ್ದ, ಅದೆಷ್ಟೋ ಜನರು ಕನಸು ನುಚ್ಚು ನೂರಾದಂತಾಗಿದೆ.
ಈ ಕಾರ್ಡ್ನ ಬೆಲೆ ಪ್ರತಿ ಕಾರ್ಡ್‌ಗೆ $5 ಮಿಲಿಯನ್. ಭಾರತೀಯ ರೂಪಾಯಿಯಲ್ಲಿ ೪೫ಕೋಟಿ. ಇಷ್ಟು ಮೊತ್ತವನ್ನು ನೀವು ಪಾವತಿ ಮಾಡಿ ಗೋಲ್ಡ್ ಕಾರ್ಡ್ ಪಡೆದರೆ ನೀವು ಅಮೆರಿಕಾದ ಖಾಯಂ ಪೌರತ್ವಪಡೆಯಬಹುದಾಗಿದೆ.
ಈ ಯೋಜನೆ ಸಧ್ಯ ಶ್ರೀಮಂತ ವಲಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದ್ದು, ಇದು ಆದಾಯ ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.