ಲಕ್ನೋದಲ್ಲಿ ನವರಾತ್ರಿ ಆಚರಣೆಗೆ ನಿರ್ಮಿಸಲಾಗಿದ್ದ ದುರ್ಗಾ ಮಂಟಪ ಇದೀಗ ಗಿನ್ನಿಸ್ ಪುಸ್ತಕಕ್ಕೆ ಸೇರ್ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋದಲ್ಲಿ ನವರಾತ್ರಿ ಆಚರಣೆಗೆ ನಿರ್ಮಿಸಲಾಗಿದ್ದ ದುರ್ಗಾ ಮಂಟಪ ಇದೀಗ ಗಿನ್ನಿಸ್ ಪುಸ್ತಕಕ್ಕೆ ಸೇರ್ಪಡೆಯಾಗಿದೆ. ಹೌದು, ಲಕ್ನೋದಲಿರುವ ದುರ್ಗಾ ಮಂಟಪ ವಿಶ್ವದ ಅತೀ ಎತ್ತರದ ದುರ್ಗಾ ಮಂಟಪವಾಗಿದೆ. 136 ಅಡಿ ಇರುವ ಮಂಟಪ ನೋಡಲು ಅತ್ಯದ್ಭುತವಾಗಿದೆ.

ಲಕ್ನೋದಲ್ಲಿರುವ ಜಾನಕಿಪುರಂನಲ್ಲಿರುವ ಮಂಟಪ ಇದೀಗ ಉತ್ತರಪ್ರದೇಶದ ಪ್ರಮುಖ ಆಕರ್ಷಣೆಯಾಗಿದೆ. ವಿಶ್ವದಲ್ಲೇ ಅತಿ ಎತ್ತರದ ಮಂಟಪ ಇದಾಗಿದ್ದು, ನೋಡುಗರ ನೆಚ್ಚಿನ ತಾಣವಾಗಿದೆ. ಪೆಂಡಾಲ್ ನಿರ್ಮಾಣ ಹಂತದಲ್ಲಿರುವ ವೃಂದಾವನದ ಚಂದ್ರೋದಯ ದೇವಾಲಯದ ಪ್ರತಿರೂಪವಾಗಿದೆ. ಇದು ವಿಶ್ವದ ಅತಿ ಎತ್ತರಡ ಧಾರ್ಮಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದು 700 ಅಡಿ ಉದ್ದ ಹಾಗೂ 5,40,000 ಚದರ ಅಡಿ ಅಗಲದ್ದಾಗಿದೆ.

ಪೆಂಡಾಲ್ ಜಾನಕಿಪುರಂನ ದುರ್ಗಾ ಪೂಜಾ ಪಾರ್ಕ್‌ನಲ್ಲಿ ಎತ್ತರದಲ್ಲಿ ನೆಲೆಸಿದೆ. ಪೂಜಾ ಉತ್ಸವ ಕಮಿಟಿ ಇದನ್ನು ನಿರ್ಮಾಣ ಮಾಡಿದೆ. ಕೊಲ್ಕತ್ತಾದ 52 ಕುಶಲಕರ್ಮಿಗಳು ಇದನ್ನು ನಿರ್ಮಿಸಿದ್ದು, ಒಂದು ತಿಂಗಳಿಗೂ ಹೆಚ್ಚು ಸಮಯ ಕಾರ್ಯನಿರ್ವಹಿಸಿದ್ದಾರೆ.ಪೆಂಡಾಲ್ ನಿರ್ಮಾಣಕ್ಕೆ ಒಟ್ಟಾರೆ 32 ಲಕ್ಷ ರೂ. ವ್ಯಯಿಸಲಾಗಿದೆ. ಪ್ರತಿ ದಿನ ಈ ದೇವಾಲಯಕ್ಕೆ 70 ಸಾವಿರಕ್ಕೂ ಹೆಚ್ಚು ಮಂದಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!