ದಿಗಂತ ವರದಿ ಮೈಸೂರು :
ಮೈಸೂರು ಮಹಾನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಇಂದು ಆಯ್ಕೆ ಮಾಡಲಾಯಿತು.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಧ್ಯಕ್ಷರು, ಸದಸ್ಯರನ್ನು ಆಯ್ಕೆ ಮಾಡಲಾಯಿತು.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ:
ಅಧ್ಯಕ್ಷರು-ಎಂ.ಎಸ್.ಶೋಭ, ಸದಸ್ಯರು- ಬಿ.ಭುವನೇಶ್ವರಿ, ರಮೇಶ್ (ರಮಣಿ), ಹಾಜಿರಾ ಸೀಮಾ, ಜಿ.ರೂಪ, ಮ.ವಿ.ರಾಮಪ್ರಸಾದ, ಶ್ರೀನಿವಾಸ್.
ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ :
ಅಧ್ಯಕ್ಷರು-ಉಷಾ, ಸದಸ್ಯರು-ಪ್ರದೀಪ್ ಚಂದ್ರ, ವಿ.ರಮೇಶ, ಬೇಗಂ, ರೇಶ್ಮ ಬಾನು, ಎಂ.ಛಾಯಾದೇವಿ, ಡಾ.ಅಶ್ವಿನಿ ಶರತ್.
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ:
ಅಧ್ಯಕ್ಷರು-ಜಿ.ಎಸ್.ಸತ್ಯರಾಜ್, ಸದಸ್ಯರು-ಎಂ.ಶಿವಕುಮಾರ್, ಆಯಾಜ್ ಪಾಷ @ ಪಂಡೂ, ಭಾಗ್ಯ, ಬಿ.ವಿ.ರವೀಂದ್ರ, ಬಿ.ವಿ.ಮಂಜುನಾಥ, ಎಸ್.ಪ್ರೇಮ.
ಲೆಕ್ಕಪತ್ರ ಸ್ಥಾಯಿ ಸಮಿತಿ:
ಅಧ್ಯಕ್ಷರು-ಕೆ.ನಿರ್ಮಲ, ಆಯೂಬ್ ಖಾನ್, ಎ.ಆರೀಫ್ ಹುಸೇನ್, ಶರತ್ ಕುಮಾರ್, ಶೋಭಾ, ಎಸ್.ಬಿ.ಎಂ.ಮAಜು, ಎನ್.ಸೌಮ್ಯ ಆಯ್ಕೆಯಾಗಿದ್ದಾರೆ.
ಸ್ಥಾಯಿ ಸಮಿತಿಗೆ ಆಯ್ಕೆಯಾದ ಅಧ್ಯಕ್ಷರು, ಸದಸ್ಯರನ್ನು ಮೇಯರ್ ರುಕ್ಮಿಣಿ ಮಾದೇಗೌಡ, ಉಪಮೇಯರ್ ಅನ್ವರ್ ಬೇಗ್ ಅವರು ಅಭಿನಂದಿಸಿದರು. ಈ ವೇಳೆ ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಪುಷ್ಪಲತ ಜಗನ್ನಾಥ್ ಇತರರು ಇದ್ದರು.