spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತನ್ನ ಕಂದನನ್ನು ಕಾಳಜಿಯಿಂದ ನೀರಿನಿಂದ ಮೇಲಕ್ಕೆ ಕರೆತರುವ ತಾಯಿ ಆನೆ: ಹೃದಯಸ್ಪರ್ಶಿ ವಿಡಿಯೋ ವೈರಲ್

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಮನುಷ್ಯರಲ್ಲೇ ಆಗಲಿ, ಪ್ರಾಣಿಗಳಲ್ಲೇ ಆಗಲಿ ಅಮ್ಮ ಮಮತೆಗೆ ಯಾವುದು ಸರಿ ಸಾಟಿಯಲ್ಲ. ಪ್ರಾಣಿಗಳು ತಮ್ಮ ಮರಿಗಳಿಗೆ ತೋರುವ ಕಾಳಜಿಯ ಅಪೂರ್ವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಇರುತ್ತದೆ. ಇಂತಹ ದೃಶ್ಯಗಳನ್ನು ನೋಡಿದರೆ ನಮ್ಮ ಮೊಗದಲ್ಲಿಯೂ ನಗು ಅರಳುವುದು ಗ್ಯಾರೆಂಟಿ.

ತಾಯಿ ಆನೆಯೊಂದು ತನ್ನ ಕಂದನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾದ ದೃಶ್ಯವಿದು.  ಸದ್ಯ ಈ ಹೃದಯಂಗಮ ದೃಶ್ಯ  ನೆಟ್ಟಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಿಡಿಯೋದಲ್ಲಿ ಏನಿದೆ?

ಆನೆಗಳ ಹಿಂಡು ನೀರಿನಲ್ಲಿ ಇರುವ ದೃಶ್ಯದ ವಿಡಿಯೋ ಕ್ಲಿಪ್ ಆರಂಭವಾಗುತ್ತದೆ. ಈ ಆನೆಗಳ ಹಿಂಡಿನಲ್ಲಿ ಒಂದು ತಾಯಿಯಾನೆ  ಮತ್ತು ಅದರ ಮರಿ ನೀರಿನಿಂದ ಮೇಲಕ್ಕೆ ಹೋಗುತ್ತಿರುತ್ತವೆ. ದಡ ತುಂಬಾ ಜಾರುತ್ತಿದ್ದರಿಂದ ಮೇಲಕ್ಕೆ ಹೋಗುವುದು ಕಷ್ಟವಾಗುತ್ತದೆ. ಆದರೆ, ಈ ಜಾರುವ ನೆಲದಲ್ಲೂ ಕಂದನ ಬಗ್ಗೆ ಎಚ್ಚರಿಕೆ ವಹಿಸುತ್ತಾ ತಾಯಿ ಆನೆ ಮೇಲೆ ಹೋಗುತ್ತದೆ ಮತ್ತು ನೀರಿನಿಂದ ಮೇಲೆ ಬಂದ ಮೇಲು ತನ್ನ ಕಂದನನ್ನು ಎಚ್ಚರಿಕೆಯಿಂದ ಕರೆತರುವ ಈ ದೃಶ್ಯ ಇದಾಗಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ  ದೃಶ್ಯ ಹಂಚಿಕೊಂಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss