ಗೌತಮ ಅದಾನಿ ಸಾಮ್ರಾಜ್ಯವೀಗ ಲೋಹಗಳ ಲೋಕಕ್ಕೂ ವಿಸ್ತಾರ

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೃಹತ್ ಬಂದರುಗಳು, ನವೀಕೃತ ಇಂಧನ ಉತ್ಪಾದನೆ ವಲಯ ಇವು ಬಹುಮುಖ್ಯವಾಗಿ ಅದಾನಿ ಉದ್ಯಮ ಸಾಮ್ರಾಜ್ಯವನ್ನು ಬಿಂಬಿಸುವ ವಲಯಗಳು. ಇದೀಗ ಗೌತಮ ಅದಾನಿ ಸಾಮ್ರಾಜ್ಯ ಲಗ್ಗೆ ಇಡುತ್ತಿರುವ ಇನ್ನೊಂದು ಉದ್ಯಮ ವಲಯವೆಂದರೆ ಲೋಹಗಳ ಸಂಸ್ಕರಣೆ.
ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿವರದ ಪ್ರಕಾರ, ಅದಾನಿ ಎಂಟರಪ್ರೈಸ್ ಇದೀಗ ಆ ರಾಜ್ಯದಲ್ಲಿ 5.2 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಲುಮಿನಿಯಂ ಸಂಸ್ಕರಣ ಘಟಕ ಸ್ಥಾಪಿಸಲಿದೆ. ಗುಜರಾತಿನಲ್ಲಿ ಅದಾಗಲೇ 5 ಲಕ್ಷ ಟನ್ ತಾಮ್ರದ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಕ್ಕೆ ಅದಾನಿ ಉದ್ಯಮವು ಸಾಲವನ್ನು ತೆಗೆದುಕೊಂಡಿದೆ. ದಕ್ಷಿಣ ಕೊರಿಯಾದ ಪೊಸ್ಕೊ ಕಂಪನಿ ಜತೆ ಸೇರಿ ಸ್ಟಿಲ್ ಉದ್ಯಮಕ್ಕೂ ಕಾಲಿಡುವುದಕ್ಕೆ ಸಮಾಲೋಚನೆ ಜಾರಿಯಲ್ಲಿದೆ.
ಸದ್ಯಕ್ಕೆ ಭಾರತದ ಲೋಹ ಉದ್ಯಮವನ್ನು ಆವರಿಸಿಕೊಂಡಿರುವ ಕಂಪನಿಗಳೆಂದರೆ ವೇಂದಾಂತ ಮತ್ತು ಆದಿತ್ಯ ಬಿರ್ಲ ಸಮೂಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!