Wednesday, August 17, 2022

Latest Posts

ಜಿಲೆಟಿನ್ ಸ್ಫೋಟ ಪ್ರಕರಣ: ಸಿಬಿಐಗೆ ತನಿಖೆ ವಹಿಸುವಂತೆ ಆಗ್ರಹ

ಹೊಸ ದಿಗಂತ ವರದಿ, ಶಿವಮೊಗ್ಗ:

ಹುಣಸೋಡು ಬಳಿ ಜ.21ರಂದು ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ತನಿಖೆ ಅಪರಿಪೂರ್ಣವಾಗಿದ್ದು, ಇದರಲ್ಲಿ ಪೊಲೀಸರು ಕೂಡ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ನಡೆಸುವಂತೆ ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೋಟದಲ್ಲಿ ನಾಪತ್ತೆಯಾಗಿದ್ದಾನೆಂದು ಹೇಳಲಾಗಿದ್ದ ಚಿಕ್ಕಭೋರೇಗೌಡರ ಮಗ ದೇವೇಂದ್ರ ಯಾನೆ ಶಶಿ ಎಫ್ಎಸ್ಎಲ್ ವರದಿಯನ್ನು ಈಗ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆಯೂ ತಮಗೂ ಅನುಮಾನವಿದೆ ಎಂದರು.
ಸ್ಫೋಟ ಸಂಭವಿಸಿದ ನಂತರ ಅಂದರೆ ರಾತ್ರಿ ಸುಮಾರು 11 ಗಂಟೆಗೆ ದೇವೇಂದ್ರ ತನ್ನ ಮೊಬೈಲ್ನಿಂದ (9448686027) ಪುನೀತನ ದೂರವಾಣಿಗೆ ಕರೆ ಮಾಡಿ ತಾನು ಬದುಕಿರುವುದಾಗಿ ಹೇಳಿದ್ದ. ಆದರೆ ಮನೆಗೆ ಬಂದಿರಲಿಲ್ಲ. ಈಗ ಪೊಲೀಸರು ಎಫ್ಎಸ್ಎಲ್ ವರದಿ ಬಂದಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಅವರ ತಂದೆ ಕೂಡ ನಂಬುತ್ತಿಲ್ಲ. ಇದರಿಂದಾಗಿ ಇಡೀ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗ ಮಾಡುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿದ್ದ ಭದ್ರಾವತಿಯ ಕೆಂಗಲ್ ಹನುಮಂತಯ್ಯ ನಗರದ ದೇವೇಂದ್ರನ ತಂದೆ ಚಿಕ್ಕಬೋರೇಗೌಡ ಮಾತನಾಡಿ, ಸ್ಪೋಟದ ನಂತರ ತಮ್ಮ ಮಗ ಬದುಕಿದ್ದ ಬಗ್ಗೆ ಮೊಬೈಲ್ ಕರೆಗಳೇ ಸಾಕ್ಷಿಗಳಾಗಿವೆ. ಆದರೆ, ಮೊಬೈಲ್ ಕರೆಯ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ. ಮಗ ದೇವೇಂದ್ರನ ಮೊಬೈಲ್ ಕರೆಯ ಮಾಹಿತಿ ಕೊಡುವವರೆಗೆ ಎಫ್ಎಸ್ಎಲ್ ವರದಿ ನಂಬಲು ಸಾಧ್ಯವಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!