ಮೈ ಕೊರೆಯುವ ಚಳಿಗೂ ಜಗ್ಗದೆ ಮಗಳ ನಿರ್ಜಿವ ಕೈಗಳನ್ನು ಬಿಡದೆ ಹಿಡಿದು ಕೂತ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೀಕರ ಭೂಕಂಪನದಲ್ಲಿ ಸಾವಿನ ಸಂಖ್ಯೆ 20 ಸಾವಿರ ದಾಟಿದೆ. ಇನ್ನೂ ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದೆ.

ಭೂಕಂಪ ಸಂಭವಿಸಿ ಐದು ದಿನಗಳೇ ಕಳೆಯುತ್ತ ಬಂದಿದ್ದು, ಬದುಕುಳಿದವರು ತಾವು ಕಳೆದುಕೊಂಡ ಪ್ರೀತಿ ಪಾತ್ರರ ನೆನೆಸಿಕೊಂಡು ಬಿಕ್ಕಳಿಸುತ್ತಿದ್ದಾರೆ.

ಒಂದು ಕಡೆ ಪುಟ್ಟ ಕಂದ ಸತ್ತು ಅಪ್ಪ ಬದುಕುಳಿದ್ದರೆ, ಮತ್ತೊಂದೆಡೆ ಕುಟುಂಬದ ಎಲ್ಲರೂ ಸತ್ತು ಒಂದು ಮಗು ಬದುಕುಳಿದಿದೆ. ಹೀಗೆ ಎಲ್ಲೆಲ್ಲೂ ನೋವಿನ ಹಾಹಾಕಾರವೇ ಕೇಳಿ ಬರುತ್ತಿದೆ.

ಈ ದುರಂತದಲ್ಲಿ 15 ವರ್ಷದ ಮಗಳನ್ನು ಕಳೆದುಕೊಂಡ ಅಪ್ಪನ ಕಣ್ಣೀರ ಕತೆ . ತನ್ನ ಮನೆಯ ಮುಂದೆ ಮಗಳ ಶವದ ಕೈ ಬಿಡಲಾರದಂತೆ ಹಿಡಿದುಕೊಂಡು ಶೂನ್ಯದಂತೆ ನೋಡುತ್ತಿದ್ದಾನೆ. ಈ ದೃಶ್ಯ ಜಾಗತಿಕ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ.

15 ವರ್ಷದ ಮಗಳು ಇರ್ಮಾಕ್ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಚಿರನಿದ್ರಗೆ ಜಾರಿದ್ದಳು. ಆಕೆಯ ಕೈ ಹೊರತುಪಡಿಸಿ ಇಡೀ ದೇಹವೇ ಅವಶೇಷಗಳಡಿ ಸಿಲುಕಿ ನಜ್ಜುಗುಜ್ಜಾಗಿತ್ತು. ಆಕೆಯನ್ನು ರಕ್ಷಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಆಕೆಯ ತಂದೆ ಆಕೆಯ ಕೈ ಹಿಡಿದುಕೊಂಡು ಅಲ್ಲೇ ಕುಳಿತಿದ್ದರು. ಅದೂ ಹೊರಗೆ ಮೈ ಕೊರೆಯುವ ಚಳಿಗಾಳಿ ಹಿಮಪಾತವಿದ್ದರೂ ಮಗಳು ಬದುಕಿಲ್ಲ ಎಂದು ತಿಳಿದಿದ್ದರೂ ಅವರು ಆಕೆಯ ಕೈ ಬಿಟ್ಟು ಬೇರೆಡೆ ಹೋಗಲು ಸಿದ್ಧರಿರಲಿಲ್ಲ ಈ ದೃಶ್ಯ ಕಣ್ಣೀರನ್ನು ತರಿಸುವಂತಿದೆ.

ಈ ಅಪ್ಪನ ಹೆಸರು ಮೆಸುಟ್ ಹ್ಯಾನ್ಸರ್(Mesut Hancer), ಮಗಳು ಹೊರ ಬರಲಾಗದೇ ಬಂಧಿಯಾಗಿರುವ ಅವಶೇಷಗಳ ಸಮೀಪ ಮಗಳ ಕೈ ಹಿಡಿದುಕೊಂಡೆ ಕೊರೆಯುವ ಚಳಿಯನ್ನು ಲೆಕ್ಕಿಸದೇ ಅವರು ಕುಳಿತಿದ್ದರು. ಮಗಳಿನಿಲ್ಲ ಎಂದು ತಿಳಿದರು ಅವರು ಅಲ್ಲಿಂದ ಹೋಗಲು ಸಿದ್ಧರಿರಲಿಲ್ಲ.

ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸುವ ವೇಳೆ ಬಹಳ ವಿಳಂಬವಾಗಿತ್ತು, ಇರ್ಮಾಕ್ ಜೀವ ಬಿಟ್ಟಿದ್ದಳು. ಎಎಫ್‌ಪಿಯ ಹಿರಿಯ ಫೋಟೋಗ್ರಾಫರ್ ಅಡೆಂ ಅಲ್ಟಾನ್ (Adem Altan) ಅಂಕಾರಾದಲ್ಲಿ ಹೃದಯ ಹಿಂಡುವಂತಿದ್ದ ಈ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!