ಮಧ್ಯರಾತ್ರಿ ಫೋನ್‌ನಲ್ಲಿ ಮಾತನಾಡ್ತಿದ್ದ ಮಗಳ ಕತ್ತು ಹಿಸುಕಿ ಕೊಂದ ತಂದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದಲ್ಲಿ ಯುವತಿಯೊಬ್ಬಳು ತನ್ನ ಸ್ನೇಹಿತನ ಜತೆ ಮಧ್ಯರಾತ್ರಿ ಮಾತನಾಡುತ್ತಿದ್ದುಮ ಕೋಪಗೊಂಡ ಮಲತಂದೆ ಮಗಳನ್ನೇ ಕತ್ತು ಹಿಸುಕಿ ಕೊಂದಿದ್ದಾನೆ.

ಹೈದರಾಬಾದ್‌ನ ಮುಶಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಾವಾಗಲೂ ಫೋನ್‌ನಲ್ಲೇ ಇರುತ್ತಿದ್ದ ಮಗಳಿಗೆ ತಂದೆ ಫೋನ್ ಹೆಚ್ಚು ಬಳಸಬೇಡ ಎಂದಿದ್ದರು. ಮಧ್ಯರಾತ್ರಿ ಫೋನ್‌ನಲ್ಲಿ ಮಾತನಾಡುವುದು ಕಂಡು, ರಾತ್ರಿ ಮಾತನಾಡಬೇಡ ಎಂದು ಅನೇಕ ಬಾರಿ ಹೇಳಿದ್ದರು. ಆದರೂ ಮಗಳು ಫೋನ್‌ನಲ್ಲಿ ಮಾತನಾಡುತ್ತಿದ್ದು, ಕೋಪದಿಂದ ಸಾಧಿಕ್ ತನ್ನ 17  ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾನೆ.

ಬಳಿಕ ತಾನೇ ಠಾಣೆಗೆ ಬಂದು ಮಗಳನ್ನು ಕೊಂದಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!