ಹಬ್ಬಗಳ ಸೀಸನ್ ಬಂತು ಅಂದ್ರೆ ಸಾಕಪ್ಪ.. ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಲು-ಸಾಲು ರಜೆ ಬಂತು ಅಂದರೆ ಖಾಸಗಿ ಬಸ್​ಗಳಿಗೆ ಹಬ್ಬವೋ ಹಬ್ಬ. ದರ ಏರಿಕೆ ಮಾಡಿ, ಜನರಿಂದ ದುಪ್ಪಟ್ಟು ದರ ವಸೂಲಿ ಶುರು ಮಾಡುತ್ತವೆ.

ಈ ಬಾರಿ ಸಾಲಾಗಿ ನಾಲ್ಕೈದು ದಿನ ರಜೆ ಸಿಕ್ಕಿದ್ದು ಜನ ತಮ್ಮ ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ. ಆದರೆ ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು ಆಗಿರುವುದು ಊರಿಗೆ ಹೊರಟವರಿಗೆ ಶಾಕ್ ನೀಡಿದೆ. ಈ ಬಗ್ಗೆ ಇದೀಗ ಜನರು ಆಕ್ರೋಶ ವ್ಯಕ್ತಪಡಿದ್ದಾರೆ. ಕೆಎಸ್ಆರ್​​ಟಿಸಿ ಬಸ್​ಗಳೂ ಕೂಡ ದರ ಏರಿಕೆ ಮಾಡಿವೆ. ಕೆಎಸ್ಆರ್​​ಟಿಸಿ ಬಸ್​ಗ ಶೇ 15 ರಿಂದ 20 ರಷ್ಟು ದರ ಏರಿಕೆ ಮಾಡಿದೆ.

ಒಟ್ಟಿನಲ್ಲಿ ಖಾಸಗಿ ಬಸ್​ಗಳೇನೋ ದುಪ್ಪಟ್ಟು ದರ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದರೆ, ಇತ್ತ ಸಾರ್ವಜನಿಕ ಸಾರಿಗೆಯಾಗಿರುವ ಕೆಎಸ್​ಆರ್​ಟಿಸಿ ಕೂಡ ಹೆಚ್ಚಿನ ದರ ಪಡೆಯಲು ಮುಂದಾಗಿರುವುದು ಇದೀಗ ಆಕ್ರೋಶಕ್ಕೆ ಗುರಿಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!