Wednesday, August 17, 2022

Latest Posts

ಸುಕ್ಷೇತ್ರ ನಾಲವಾರ ಪಲ್ಲಕ್ಕಿ ಉತ್ಸವ ಶ್ರೀಗಳ ಶೋಭಾಯಾತ್ರೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಕಲಬುರಗಿ:

ಜಿಲ್ಲೆಯ ಸುಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅಂಗವಾಗಿ ನಾಲವಾರ ಪ್ರಮುಖ ಬೀದಿಗಳಲ್ಲಿ ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ಹಾಗೂ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ಶೋಭಾ ಯಾತ್ರೆ ಸಂಭ್ರಮದಿಂದ ನೆರವೇರಿತು.
ಗುರುವಾರ ಸಾಯಂಕಾಲ 6ಗಂಟೆಗೆ ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳ ಗದ್ದುಗೆಗೆ ಪರಮ ಪೂಜ್ಯ ಶ್ರೀಗಳು ವಿಶೇಷ ಪೂಜೆ ಮಹಾಮಂಗಳಾರತಿ ಮಾಡುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು ನೆರೆದ ಸಹಸ್ರಾರು ಭಕ್ತರ ಜಯಘೋಷ ಮೊಳಗಿಸಿದರು ನಂತರ ಆರಂಭವಾದ ಉತ್ಸವದಲ್ಲಿ ವೀರಗಾಸೆ ಕುಣಿತ .ಪುರವಂತಿಕೆ ಡೊಳ್ಳು ಬಾಜಾ ಭಜಂತ್ರಿ ಹಲಗೆ ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಗೆ ಶೋಭೆ ತಂದವು
ನಾಲವಾರ ಕ್ಷೇತ್ರ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಮಕ್ಕಳು ಪೂರ್ಣಕುಂಭ ಕಳಸಗಳೊಂದಿಗೆ ಪೂಜ್ಯ ಶ್ರೀಗಳು ಭರಮಾಡಿಕೊಂಡರು ಪಾದಗಳಿಗೆ ನೀರು ಎರೆಯುವುದರ ಮೂಲಕ ಪೂಜೆ ಸಲ್ಲಿಸಿ ಪುನೀತರಾದರು. ಪ್ರತಿಯೊಂದು ಮನೆಯ ಅಂಗಳದಲ್ಲಿ ರಂಗುರಂಗಿನ ರಂಗೋಲಿ ಕಂಗೊಳಿಸುತ್ತಿದ್ದವು. ಇಡೀ ನಾಲವಾರ ಕ್ಷೇತ್ರವೇ ಭೂಕೈಲಾಸ ಗಾಗಿ ಕಂಗೊಳಿಸುತ್ತಿತ್ತು.

ಭಕ್ತರಿಗಾಗಿ ವಿಶೇಷ ಪ್ರಸಾದ ಸೇವೆ
ಉತ್ಸವದಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತ ತೆರೆಯಾಗಿ ಗ್ರಾಮಸ್ಥರ ವತಿಯಿಂದ ವಿಶೇಷ ಪ್ರಸಾದ ಸೇವೆ ವ್ಯವಸ್ಥೆ ಮಾಡಲಾಗಿತ್ತು ಬಜ್ಜಿ ಮತ್ತು ರೊಟ್ಟಿ .ಸಜ್ಜಕ ಅನ್ನ ಪ್ರಸಾದ ಸವಿದು ಸಹಸ್ರಾರು ಭಕ್ತರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!